
ಪ್ರಗತಿವಾಹಿನಿ ಸುದ್ದಿ: ಮನಿ ಕಂಟ್ರೋಲ್ ಹಿಂದಿ ಪ್ರಕಾರ, ದೇಶದಲ್ಲಿ ಕಳೆದ ಒಂದು ವಾರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹5,010 ಏರಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ₹4,600 ಏರಿಕೆಯಾಗಿದೆ.
ಈ ಅವಧಿಯಲ್ಲಿ ಬೆಳ್ಳಿಯ ಬೆಲೆ ₹6,000 ಹೆಚ್ಚಾಗಿದೆ. ಮನಿ ಕಂಟ್ರೋಲ್ ಪ್ರಕಾರ, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹ 95,820/10 ಗ್ರಾಂ ಮತ್ತು ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ10 ಗ್ರಾಂ ಗೆ ₹95,670 ಆಗಿದೆ.
6 ತಿಂಗಳಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ ₹75,000 ಗ್ರಾಂ ಆಗಲಿದೆ: ತಜ್ಞರು
ಇತ್ತೀಚೆಗೆ, 24 ಕ್ಯಾರೆಟ್ ಚಿನ್ನದ ಬೆಲೆ ₹96,000/10 ಗ್ರಾಂ ತಲುಪಿದ್ದು, ‘ಪೇಸ್ 360’ ಮುಖ್ಯ ಜಾಗತಿಕ ತಂತ್ರಜ್ಞ ಅಮಿತ್ ಗೋಯಲ್, 6-10 ತಿಂಗಳೊಳಗೆ ಚಿನ್ನದ ಬೆಲೆಯಲ್ಲಿ ಮಧ್ಯಮಾವಧಿಯ ತಿದ್ದುಪಡಿ ಆಗಬಹುದು ಎಂದು ಹೇಳಿದ್ದಾರೆ.
ಈ ಅವಧಿಯಲ್ಲಿ ಚಿನ್ನದ ಬೆಲೆ 22 ಕ್ಯಾರೇಟ್ ಗೆ ₹75,000 ಹಾಗೂ 24 ಕ್ಯಾರೇಟ್ ಗೆ ₹79,000/10 ತಲುಪಬಹುದು. 2028-29ರ ವೇಳೆಗೆ ಚಿನ್ನದ ಬೆಲೆ ₹1,38,000/10 ಗ್ರಾಂ ತಲುಪಬಹುದು ಎಂದು ಗೋಯಲ್ ಅಂದಾಜಿಸಿದ್ದಾರೆ.