ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಇದೀಗ ಕಳೆದ ಎರಡು ದಿನಗಳಿಂದ ಕೊಂಚ ಇಳಿಕೆಯಾಗಿದೆ. ಇಂದು ದೇಶದಲ್ಲಿ 1 ಗ್ರಾಂ 24 ಕ್ಯಾರಟ್ ಬಂಗಾರದ ಬೆಲೆ 4,720 ದಾಖಲಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಗೆ 44,200 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 48,220 ರೂಪಾಯಿ ದಾಖಲಾಗಿದೆ.
ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 63,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,600 ಇದೆ.
ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಹೀಗಿದೆ- ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,200 ರೂ. 24 ಕ್ಯಾರೆಟ್ ನ ಚಿನ್ನ 48,220 ರೂಪಾಯಿ ಇದೆ.
ಚೆನ್ನೈ ನಲ್ಲಿ 22 ಕ್ಯಾರಟ್ ನ ಬಂಗಾರ 44,510 ರೂ ಇದ್ದರೆ 24 ಕ್ಯಾರೆಟ್ ನ ಚಿನ್ನ 48,560 ರೂ ಇದೆ.
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 46,350 ರೂ ಹಾಗೂ 24 ಕ್ಯಾರೆಟ್ ನ ಚಿನ್ನದ ಬೆಲೆ 50,580 ರೂ ಇದೆ. ಒಟ್ಟಾರೆ ಇಂದು ಬೆಳಿಗ್ಗೆ ಬಂಗಾರದ ಬೆಲೆಯಲ್ಲಿ ಹಲವು ನಗರಗಳಲ್ಲಿ ತಟಸ್ಥತೆ ಕಂಡುಬಂದಿದೆ.
ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ