*ಸಾರ್ವಕಾಲಿಕ ದಾಖಲೆಯ ಗರಿಷ್ಠ ಬೆಲೆ ತಲುಪಿದ ಚಿನ್ನ, ಬೆಳ್ಳಿ*

ಪ್ರಗತಿವಾಹಿನಿ ಸುದ್ದಿ: ಇನ್ನೇನು ಯುಗಾದಿ ಸಮಿಪಿಸುತ್ತಿದ್ದಂತೆ ಶುಭ ಸಮಾರಂಭಗಳು ಹೆಚ್ಚಾಗಲಿದೆ. ಆದರೆ ಈ ವೇಳೆ ಚಿನ್ನ ಬೆಳ್ಳಿ ಖರೀದಿಸುವರಿಗೆ ಶಾಕ್ ಎದುರಾಗಿದೆ. ಚಿನ್ನ ಹಾಗೂ ಬೆಳ್ಳಿಯ ದರ ಸಾರ್ವಕಾಲಿಕ ದಾಖಲೆಯ ಗರಿಷ್ಠ ಬೆಲೆಯನ್ನು ತಲುಪಿದ್ದು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ನವದೆಹಲಿಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ 90750 ರೂ. ಮುಟ್ಟಿದ್ದು ಬೆಳ್ಳಿ ಬೆಲೆ ಕೆಜಿಗೆ 1,02,500 ರೂ. ತಲುಪಿದೆ. ಮಾರ್ಚ್, ಏಪ್ರಿಲ್ ತಿಂಗಳು ಮದುವೆ ಮತ್ತು ಶುಭಸಮಾರಂಭಗಳ ಸಮಯವಾಗಿರುವುದರಿಂದ ಈ ಬೆಲೆ ಇನ್ನಷ್ಟು ಏರಿಕೆಯಾಗಲಿರುವ ಸಾಧ್ಯತೆಯು ಮಧ್ಯವವರ್ಗದವರಲ್ಲಿ ಆತಂಕ ಮೂಡಿಸಿದೆ. ಕಳೆದ ಗುರುವಾರ ಪ್ರತಿ ಹತ್ತು ಗ್ರಾಂಗೆ 89450 ರೂ. ಇದ್ದ ಶುದ್ಧ ಚಿನ್ನ ಈಗ ಏಕಾಏಕಿ ಸಾವಿರ ರೂ. ಗಳಷ್ಟು ಏರಿಕೆಯಾಗಿದೆ. ಭಾರತದ ಶೇರು ಮಾರುಕಟ್ಟೆಯು ನಷ್ಟದಲ್ಲಿರುವ ಕಾರಣ ಹೂಡಿಕೆದಾರರು ಚಿನ್ನದ ಹೂಡಿಕೆಯತ್ತ ಮುಖ ಮಾಡಿರುವುದೂ ಸಹ ಬೆಲೆಯೇರಿಕೆಗೆ ಕಾರಣವಾಗಿದೆ.
ಬೆಳಗಾವಿಯಲ್ಲಿ 22 ಕ್ಯಾರೆಟ್ ಚಿನ್ನದ ಬೇಲೆ 10 ಗ್ರಾಮ್ ಗೆ 82500 ರೂ ಇದ್ದರೆ 24. ಕ್ಯಾರೆಟ್ ಗೆ 90000 ರೂ ತಲುಪದೆ.