Latest

ಹಬ್ಬದ ಸಂಭ್ರಮದಲ್ಲಿದ್ದ ಆಭರಣ ಪ್ರಿಯರಿಗೆ ಇಲ್ಲಿದೆ ಮಹತ್ವದ ಸುದ್ದಿ; ಚಿನ್ನ, ಬೆಳ್ಳಿ ದರ ಇಂದು ಎಷ್ಟಿದೆ ಗೊತ್ತೆ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಚಿನ್ನ, ಬೆಳ್ಳೆ ದರದಲ್ಲಿ ದೈನಂದಿನ ದರ ಬದಲಾವಣೆಯಾಗುವುದು ಸರ್ವೇಸಾಮಾನ್ಯ. ನಿನ್ನೆಯಷ್ಟೇ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿತ್ತು. ಆದರೆ ಇಂದು ಆಭರಣ ಬೆಲೆ ಏನಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಆಭರಣ ಪ್ರಿಯರು ನಿನ್ನೆಯಷ್ಟೇ ಚಿನ ಬೆಳ್ಳೆ ದರ ಇಳಿಕೆಯಾಗಿದೆ ಎಂದು ಸಂತಸದಲ್ಲಿದ್ದರು. ಅಶ್ಟರಲ್ಲಾಗಲೇ ಇಂದು ಕೊಂಚ ದರ ಏರಿಕೆಯಾಗಿದೆ.

Home add -Advt

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 43,800 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,38,000 ರೂ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2000 ರೂ.ನಷ್ಟು ಏರಿಕೆಯಾಗಿದೆ.

24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 47,780 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,77,800 ರೂ ಆಗಿದೆ. ಬೆಳ್ಳಿದರದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದ್ದು, ಕೆಜಿ ಬೆಳ್ಳಿಗೆ 61,200 ರೂಪಾಯಿ ಆಗಿದೆ. ಸುಮಾರು 500 ರೂಪಾಯಿ ಏರಿಕೆ ಕಂಡಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,110 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,41,100 ರೂ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 48,120 ರೂ ಆಗಿದ್ದು, 100 ಗ್ರಾಂ ಚಿನ್ನ 4,81,200 ರೂ ಆಗಿದೆ. ಇನ್ನು ಕೆಜಿ ಬೆಳ್ಳಿ ಬೆಲೆ 65,200 ರೂ ಆಗಿದೆ.

ಇನ್ನು ದೆಹಲಿ, ಜೈಪುರ, ಮುಂಬೈ, ಹೈದರಾಬಾದ್ ಸೇರಿದಂತೆ ಎಲ್ಲಾ ಮಹಾನಗರಗಳಲ್ಲೂ ಚಿನ್ನ ಬೆಳಿ ದರದಲ್ಲಿ ಇಂದು ಏರಿಕೆಯಾಗಿದೆ.
ದಿಢೀರ್ ದೆಹಲಿ ಪ್ರವಾಸ ಕೈಗೊಂಡ ಸಿಎಂ

Related Articles

Back to top button