ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೈನಂದಿನ ವಹಿವಾಟಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ ಸಾಮಾನ್ಯ. ಇಂದು ಚಿನ್ನದ ದರದಲ್ಲಿ ಮತ್ತೆ ಕೊಂಚ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಮತ್ತೆ ನಿರಾಶೆಯಾಗಿದೆ.
ರಷ್ಯಾ- ಉಕ್ರೇನ್ ಯುದ್ಧ ಕೂಡ ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಭಾರತದಲ್ಲಿ ಇಂದು ಕೂಡ ಚಿನ್ನದ ದರ ಏರಿಕೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,400 ರೂ. ಇದ್ದುದು ಇಂದು 48,410 ರೂ.ಗೆ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,800 ರೂ. ಇದ್ದುದು 52,810 ರೂ. ಆಗಿದೆ.
22 ಕ್ಯಾರೆಟ್ ಚಿನ್ನ ಚೆನ್ನೈನಲ್ಲಿ- 48,950 ರೂ. ಮುಂಬೈ- 48,410 ರೂ, ದೆಹಲಿ- 48,410 ರೂ, ಕೊಲ್ಕತ್ತಾ- 48,410 ರೂ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ ಚೆನ್ನೈ- 53,400 ರೂ, ಮುಂಬೈ- 52,810 ರೂ, ದೆಹಲಿ- 52,810 ರೂ, ಕೊಲ್ಕತ್ತಾ- 52,810 ರೂ, ಬೆಂಗಳೂರು- 52,810 ರೂ, ಹೈದರಾಬಾದ್- 52,810 ರೂ ಆಗಿದೆ.
ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು, ಕೆಜಿ ಬೆಳ್ಳಿ ದರ ಬೆಂಗಳೂರಿನಲ್ಲಿ 74,700 ರೂಪಾಯಿ ಆಗಿದ್ದರೆ ಮೈಸೂರಿನಲ್ಲಿ 74,100 ರೂ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ