Latest

ಚಿನ್ನ-ಬೆಳ್ಳಿ ದರದಲ್ಲಿ ಇಂದು ಏನೆಲ್ಲ ಬದಲಾವಣೆಯಾಗಿದೆ ಗೊತ್ತೆ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುಗಾದಿ ಸಂದರ್ಭದಲ್ಲಿ ಆಭರಣ ಪ್ರಿಯರಿಗೆ ಸಮಾಧಾನಕರ ಸುದ್ದಿ, ಕಳೆದ ನಾಲ್ಕು ದಿನಗಳಿಂದ ದೇಶದಲ್ಲಿ ಚಿನ್ನಾಭರಣ ಬೆಲೆ ಸತತ ಇಳಿಕೆಯಾಗುತ್ತಿತ್ತು. ಆದರೆ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿದೆ.

ಇಂದು ಬೆಳ್ಳಿ ದರದಲ್ಲಿ ಒಂದೇ ದಿನದಲ್ಲಿ 5,300 ರೂ. ಕುಸಿತ ಕಂಡಿದೆ. ಭಾರತದಲ್ಲಿ 22ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,650 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,980ರೂ ಆಗಿದೆ. ಮಹಾನಗರಗಳಲ್ಲಿ ಚಿನ್ನ ಬೆಳ್ಳಿ ದರ ಇಂದು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Home add -Advt

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,650 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನ 51,980 ರೂಪಾಯಿ ಇದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 47,930 ರೂ. ಮುಂಬೈ- 47,650 ರೂ, ದೆಹಲಿ- 47,650 ರೂ, ಕೊಲ್ಕತ್ತಾ- 47,650 ರೂ, ಹೈದರಾಬಾದ್- 47,650 ರೂ, ಪುಣೆ- 47,700 ರೂ ಆಗಿದೆ,

24 ಕ್ಯಾರೆಟ್ ಚಿನ್ನ ಚೆನ್ನೈ- 52,290 ರೂ, ಮುಂಬೈ- 51,980 ರೂ, ದೆಹಲಿ- 51,980 ರೂ, ಕೊಲ್ಕತ್ತಾ- 51,980 ರೂ, ಹೈದರಾಬಾದ್- 51,980 ರೂ, ಪುಣೆ- 52,030 ರೂ, ಮಂಗಳೂರು- 51,980 ರೂ ನಿಗದಿಯಾಗಿದೆ.

ಇಂದು ದೇಶದಲ್ಲಿ ಬೆಳ್ಳಿ ದರ ಇಳಿಕೆಯಾಗಿದ್ದು,  ಕೆಜಿ ಬೆಳ್ಳಿಗೆ ದರ ಇಂದು 66,800 ರೂ.ಆಗಿದೆ.  ಆದರೆ ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 71,300 ರೂ ಇದೆ.

ಪೊಲೀಸರ ಕಿರುಕುಳ ತಾಳಲಾರದೆ ಖ್ಯಾತ ವೈದ್ಯೆ ಆತ್ಮಹತ್ಯೆ

Related Articles

Back to top button