Latest

ಹಬ್ಬದ ಸಂಭ್ರಮದಲ್ಲೇ ಮತ್ತೆ ಏರಿಕೆಯಾಯ್ತು ಚಿನ್ನಾಭರಣಗಳ ದರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುಗಾದಿ ಸಂಭ್ರಮದಲ್ಲಿರುವ ಜನರಿಗೆ ಬೆಲೆ ಏರಿಕೆಯ ಬಿಸಿ ಜತೆಗೆ ಚಿನ್ನಾಭರಣಗಳ ದರದಲ್ಲಿಯೂ ಏರಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಮತ್ತೆ ಶಾಕ್ ನೀಡಿದೆ.

ನಿನ್ನೆ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ದರ ಇಂದು ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ದರ ಇಂದು 10 ಗ್ರಾಂ ಗೆ 450 ರೂ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಇಂದು ಕೆ ಜಿ ಬೆಳ್ಳಿ ಬೆಲೆ 800 ರೂ ಹೆಚ್ಚಳವಾಗಿದೆ.

Home add -Advt

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,100 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನ 52,470 ರೂಪಾಯಿ ಇದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 52,730 ರೂ, ಮುಂಬೈ- 52,470 ರೂ, ದೆಹಲಿ- 52,470 ರೂ, ಕೊಲ್ಕತ್ತಾ- 52,470 ರೂ, ಹೈದರಾಬಾದ್- 52,470 ರೂ, ಪುಣೆ- 52,550 ರೂ, ಮಂಗಳೂರು- 52,470 ರೂ ಇದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 52,730 ರೂ, ಮುಂಬೈ- 52,470 ರೂ, ದೆಹಲಿ- 52,470 ರೂ, ಕೊಲ್ಕತ್ತಾ- 52,470 ರೂ, ಹೈದರಾಬಾದ್- 52,470 ರೂ, ಪುಣೆ- 52,550 ರೂ, ಮಂಗಳೂರು- 52,470 ರೂ ನಿಗದಿಯಾಗಿದೆ.

ಇಂದು ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 71,700 ರೂ ಆದರೆ, ಮೈಸೂರು, ಮಂಗಳೂರು, ಚೆನ್ನೈನಲ್ಲಿಯೂ ಕೂಡ ಇದೇ ದರ ನಿಗದಿಯಾಗಿದೆ.

Related Articles

Back to top button