Latest

ಹೇಗಿದೆ ಇಂದು ಚಿನ್ನ ಬೆಳ್ಳಿ ದರ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನ-ಬೆಳ್ಳಿ ದರ ಇಂದು ಕೊಂಚ ಸ್ಥಿರತೆ ಕಾಯ್ದುಕೊಂಡಿದೆ. ಆಭರಣ ಕೊಂಡುಕೊಳ್ಳಲು ಪ್ಲಾನ್ ಮಾಡಿದ್ದರೆ ಇಂದಿನ ಚಿನ್ನ-ಬೆಳ್ಳಿ ದರ ಗಮನಿಸಲೇಬೇಕು.

ಭಾರತದಲ್ಲಿ ಇಂದು 22ಕ್ಯಾರಟ್ ಚಿನ್ನ ನಿನ್ನೆಗೆ ಹೋಲಿಸಿದರೆ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಆದರೆ 24 ಕ್ಯಾರಟ್ ಚಿನ್ನದ ದರ ಹಲವೆಡೆ ಬದಲಾವಣೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 10 ಗ್ರಾಂಗೆ 47,950 ರೂಪಾಯಿ ಇದೆ. ಆದರೆ 24 ಕ್ಯಾರೆಟ್ ಚಿನ್ನ 52,460 ರೂಪಾಯಿಗೆ ಏರಿಕೆಯಾಗಿದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,200 ರೂ. ಮುಂಬೈ- 47,950 ರೂ, ದೆಹಲಿ- 47,950 ರೂ, ಕೊಲ್ಕತ್ತಾ- 47,950 ರೂ, ಹೈದರಾಬಾದ್- 47,950 ರೂ, ಪುಣೆ- 48,000 ರೂ ಆಗಿದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 52,630 ರೂ, ಮುಂಬೈ- 52,460 ರೂ, ದೆಹಲಿ- 52,480 ರೂ, ಕೊಲ್ಕತ್ತಾ- 52,480 ರೂ, ಹೈದರಾಬಾದ್- 52,460 ರೂ, ಪುಣೆ- 52,400 ರೂ ಇದೆ.

ಇಂದು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬದಿಲ್ಲ. ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 71,300 ರೂ ಇದೆ. ದೆಹಲಿ ಹಾಗೂ ಕೋಲ್ಕತ್ತಾದಲ್ಲಿ 66,800 ರೂ ಇದೆ.

Related Articles

Back to top button