Latest

ಭಾನುವಾರ ಬಂಗಾರದ ಬೆಲೆಯಲ್ಲಿ ಆಗಿರುವ ಬದಲಾವಣೆಯೇನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿನ್ನೆ ಏರಿಕೆಯಾಗಿದ್ದ ಚಿನ್ನ-ಬೆಳ್ಳಿ ದರ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ವೀಕೆಂಡ್ ವೇಳೆ ಬಂಗಾರ ಖರೀದಿಸಲು ಪ್ಲಾನ್ ಮಾಡಿದ್ದರೆ ಇಂದಿನ ಚಿನ್ನಾಭರಣಗಳ ದರದ ಬಗ್ಗೆ ಗಮನ ಹರಿಸಲೇಬೇಕು.

ಇಂದು ದೇಶದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಹಾನಗರಗಳಲ್ಲಿಯೂ ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂಗೆ 47,400 ರೂ ಇದೆ. 24 ಕ್ಯಾರೆಟ್ ಚಿನ್ನದ ದರ 51,710 ರೂ ಇದೆ.

ಇನ್ನು ಹಲವು ನಗರಗಳಲ್ಲಿ ಚಿನ್ನದ ದರ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,770 ರೂ. ದೆಹಲಿ- 47,400 ರೂ, ಹೈದರಾಬಾದ್- 47,400 ರೂ, ಪುಣೆ – 47,550 ರೂ ಆಗಿದೆ. ಮೈಸೂರು 47,400 ರೂ ಇದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 53,200 ರೂ, ದೆಹಲಿ- 51,380 ರೂ, ಕೊಲ್ಕತ್ತಾ- 51,700 ರೂ, ಹೈದರಾಬಾದ್- 51,710 ರೂ, ಪುಣೆ- 51,860 ರೂ.ಆಗಿದೆ. ಮೈಸೂರು-51,710 ರೂ ಆಗಿದೆ.

ಇಂದು ಭಾರತದಲ್ಲಿ ಬೆಳ್ಳಿದರ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 68,800 ರೂ ಆಗಿದೆ. ಚೆನ್ನೈ ನಲ್ಲಿಯೂ ಕೆಜಿ ಬೆಳ್ಳಿ 66,800 ರೂ ಆಗಿದೆ. ದೆಹಲಿಯಲ್ಲಿ 62,500 ಮುಂಬೈ 62,500 ರೂ, ಮಂಗಳೂರು 66,800 ರೂ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button