Latest

ಚಿನ್ನಾಭರಣ ಖರೀದಿಗೆ ಮುಂದಾದರೆ ಇಂದಿನ ಬೆಲೆ ಗಮನಿಸಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದಲ್ಲಿ ಚಿನ್ನ-ಬೆಳ್ಳಿ ದರ ನಿನ್ನೆ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇಂದು ಕೂಡ ಆಭರಣಗಳ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಹಾಗಾದರೆ ಬಂಗಾರ ಖರೀದಿಸಲು ಪ್ಲಾನ್ ಮಾಡಿದ್ದರೆ ಇಂದಿನ ಚಿನ್ನಾಭರಣಗಳ ದರದ ಯಾವ ನಗರದಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ.

ಇಂದು ದೇಶದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಹಾನಗರಗಳಲ್ಲಿಯೂ ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂಗೆ 47,400 ರೂ ಇದೆ. 24 ಕ್ಯಾರೆಟ್ ಚಿನ್ನದ ದರ 51,710 ರೂ ಇದೆ.

ಇನ್ನು ಹಲವು ನಗರಗಳಲ್ಲಿ – 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,770 ರೂ. ದೆಹಲಿ- 47,400 ರೂ, ಹೈದರಾಬಾದ್- 47,400 ರೂ, ಪುಣೆ – 47,480 ರೂ ಆಗಿದೆ. ಮೈಸೂರು 47,400 ರೂ ಇದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 53,200 ರೂ, ದೆಹಲಿ- 51,710 ರೂ, ಕೊಲ್ಕತ್ತಾ- 51,700 ರೂ, ಹೈದರಾಬಾದ್- 51,710 ರೂ, ಪುಣೆ- 51,790 ರೂ.ಆಗಿದೆ. ಮೈಸೂರು-51,710 ರೂ ಇದೆ.

ಇಂದು ಭಾರತದಲ್ಲಿ ಬೆಳ್ಳಿದರದಲ್ಲಿಯೂ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ಯಥಾಸ್ಥಿತಿಯಲ್ಲಿದ್ದು 66,800 ರೂ ಇದೆ. ಚೆನ್ನೈ ನಲ್ಲಿಯೂ ಕೆಜಿ ಬೆಳ್ಳಿ 66,800 ರೂ ಇದೆ. ದೆಹಲಿಯಲ್ಲಿ 62,500 ಮುಂಬೈ 62,500 ರೂ, ಮಂಗಳೂರು 66,800 ರೂ ಇದೆ.

Related Articles

Back to top button