Latest

ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಏರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿನ್ನಾಭರಣ ಖರೀದಿಗೆ ಪ್ಲಾನ್ ಮಾಡಿದ್ದರೆ ಇಂದಿನ ಬಂಗಾರ-ಬೆಳ್ಳಿ ದರದ ಬಗ್ಗೆ ಗಮನಿಸಲೇ ಬೇಕು. ಎರಡು ದಿನ ಕೊಂಚ ಇಳಿಕೆ ಕಂಡಿದ್ದ ಚಿನ್ನ-ಬೆಳ್ಳಿ ದರ ಇಂದು ಮತ್ತೆ ಏರಿಕೆಯಾಗಿದೆ.

ಇಂದು ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,400 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,700 ಆಗಿದೆ. ಮಹಾನಗರಗಳಲ್ಲಿ ಚಿನ್ನ ಬೆಳ್ಳಿ ದರ ಇಂದು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Related Articles
Home add -Advt

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,400 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನ 51,700 ರೂಪಾಯಿ ಆಗಿದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 47,930 ರೂ. ಮುಂಬೈ- 47,400 ರೂ, ದೆಹಲಿ- 47,300 ರೂ, ಕೊಲ್ಕತ್ತಾ- 47,400 ರೂ, ಮಂಗಳೂರು- 47,400 ರೂ, ಮೈಸೂರು- 47,400 ರೂ ಆಗಿದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 52,290 ರೂ, ಮುಂಬೈ- 51,700 ರೂ, ದೆಹಲಿ- 51,700 ರೂ, ಕೊಲ್ಕತ್ತಾ- 51,700 ರೂ, ಹೈದರಾಬಾದ್- 51,700 ರೂ, ಕೇರಳ 51,700 ರೂ, ಪುಣೆ- 51,800 ರೂ, ಮಂಗಳೂರು- 51,700 ರೂ, ಮೈಸೂರು- 51,700 ರೂ. ಆಗಿದೆ.

ಇಂದು ದೇಶದಲ್ಲಿ ಬೆಳ್ಳಿ ದರ ಕೂಡ ಏರಿಕೆ ಆಗಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ- 72,600 ರೂ ನಿಗದಿಯಾಗಿದೆ. ಚನ್ನೈನಲ್ಲಿ ಇದೇ ದರ ಇದೆ.

LPG ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರದಲ್ಲಿಯೂ ಏರಿಕೆ

Related Articles

Back to top button