Latest

ಆಭರಣ ಪ್ರಿಯರಿಗೆ ಬಿಗ್ ಶಾಕ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕುಸಿತವಾಗುತ್ತಿದ್ದಂತೆ ಮದುವೆ ಸಮಾರಂಭಗಳು ಆರಂಭವಾಗಿವೆ. ಇದರ ಬೆನ್ನಲ್ಲೇ ಚಿನ್ನಾಭರಣ ದರದಲ್ಲಿ ಕೂಡ ಏರಿಕೆಯಾಗಿದೆ.

ಆಭರಣ ಕೊಳ್ಳುವವರಿಗೆ ಪ್ರತಿದಿನದ ಚಿನ್ನಾಭರಣಗಳ ಬೆಲೆ ಬಗ್ಗೆ ಗೊತ್ತಿರಲೇಬೇಕು. ಯಾವ ನಗರದಲ್ಲಿ ಚಿನ್ನ, ಬೆಳ್ಳಿ ರೇಟ್ ಎಷ್ಟಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನ 46,800 ರೂ ಆಗಿದ್ದು, 1000 ರೂ ಏರಿಕೆ ಕಂಡಿದೆ. 22 ಕ್ಯಾರಟ್ 100 ಗ್ರಾಂ ಚಿನ್ನ 4,68,000 ರೂ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ ಇಂದು 51,050 ರೂ. ಇದೆ.

ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 67,400 ರೂಪಾಯಿ ಆಗಿದೆ.

ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನ 46,800 ರೂ. ಇದ್ದರೆ, 100 ಗ್ರಾಂಗೆ 4,68,000 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 51,050 ರೂಪಾಯಿ ಇದೆ. 24ಕ್ಯಾರಟ್ 100 ಗ್ರಾಂ ಚಿನ್ನಕ್ಕೆ 5,10,500 ರೂಪಾಯಿ ಇದೆ.

ಕೆಜಿ ಬೆಳ್ಳಿಗೆ 63,000 ರೂಪಾಯಿ ಇದೆ.

ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂಗೆ 46,800 ರೂ. ಇದ್ದರೆ 100 ಗ್ರಾಂಗೆ 4,68,000 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 51,050 ರೂ. ಇದ್ದು, 100 ಗ್ರಾಂಗೆ 5,10,500 ರೂಪಾಯಿ ದರ ನಿಗದಿಯಾಗಿದೆ. ಇನ್ನು ಕೆಜಿ ಬೆಳ್ಳಿಗೆ ಇಂದು 67,400 ರೂಪಾಯಿ ಇದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button