
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಜನರು ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಬೆಳಗಾವಿ – ದೆಹಲಿ ನೇರ ವಿಮಾನಯಾನ ಆರಂಭವಾಗಲಿದೆ.
149 ಸೀಟರ್ ಸ್ಫೈಸ್ ಜೆಟ್ ವಿಮಾನ ಆಗಸ್ಟ್ 13ರಿಂದ ಬೆಳಗಾವಿ – ದೆಹಲಿ – ಲೇಹ್ ಮಧ್ಯೆ ಸಂಚರಿಸಲಿದೆ. ಆರಂಭದಲ್ಲಿ ವಾರದಲ್ಲಿ 2 ದಿನ ಅಂದರೆ, ಸೋಮವಾರ ಮತ್ತು ಶುಕ್ರವಾರ ವಿಮಾನ ಸಂಚರಿಸಲಿದೆ. ಸಂಜೆ 4.35ಕ್ಕೆ ಬೆಳಗಾವಿಗೆ ಆಗಮಿಸಲಿರುವ ವಿಮಾನ 5.05ಕ್ಕೆ ಇಲ್ಲಿಂದ ದೆಹಲಿಗೆ ಹೊರಡಲಿದೆ.

ಈಚೆಗಷ್ಟೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ಈ ಬಗ್ಗೆ ವಿಶೇಷ ಪ್ರಯತ್ನ ಮಾಡಿದ್ದರು. ಮುಖ್ಯಮಂತ್ರಿಗಳ ಮೂಲಕ ಪತ್ರವ್ಯವಹಾರವನ್ನೂ ನಡೆಸಿದ್ದಲ್ಲದೆ, 2 -3 ಮೀಟಿಂಗ್ ನಡೆಸಿದ್ದರು.
ಈ ಹಿಂದೆ ಜಿಲ್ಲೆಯ ಕೆಲವು ಶಾಸಕರು ಮತ್ತು ಸಂಘ ಸಂಸ್ಥಗಳೂ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದವು.(ಪ್ರಗತಿವಾಹಿನಿ ಸುದ್ದಿ)
ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ನೇಮಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ