ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದುಕೊಂಡಿದೆ. ಈ ನಡುವೆ ರಾಜ್ಯ ಸರ್ಕಾರ ಜನರಿಗೆ ಭರ್ಜರಿ ಗಿಪ್ಟ್ ನೀಡಿದೆ. ಇಂದಿನಿಂದ ನೂತನವಾಗಿ ವಿದ್ಯುತ್ ದರ ಪರಿಷ್ಕರಣೆ ಆಗಿದ್ದು, 100 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವ ಗ್ರಾಹಕರಿಗೆ ಪ್ರತಿ ಯುನಿಟ್ ಗೆ 1 ರೂ. 10 ಪೈಸೆ ಕಡಿತ ಮಾಡಲು ನಿರ್ಧರಿಸಲಾಗಿದೆ.
ಉಚಿತ ವಿದ್ಯುತ್ ನಡುವೆಯೂ ಕೆಇಆರ್ ಸಿ ನೂತನ ದರ ಜಾರಿ ಮಾಡಿದೆ. 15 ವರ್ಷಗಳ ಬಳಿಕ ವಿದ್ಯುತ್ ದರದಲ್ಲಿ ಭಾರಿ ಇಳಿಕೆ ಕಂಡಿದೆ. 2024-25 ನೇ ಸಾಲಿಗೆ ಅನ್ವಯವಾಗುವಂತೆ ಕೆಇಆರ್ಸಿ ಆದೇಶ ಇಂದಿನಿಂದ ಜಾರಿಗೆ ಆಗಲಿದ್ದು, ಎಲ್ಲಾ ಎಸ್ಕಾಂಗಳಲ್ಲೂ ಏಕರೂಪದ ದರ ಜಾರಿಗೆ ಬರಲಿದೆ.
ಮುಂದಿನ ತಿಂಗಳಿನ ಬಿಲ್ ನಲ್ಲಿ ಹೊಸ ಪರಿಷ್ಕರಣೆಯಾಗಿರುವ ದರ ಬರಲಿದೆ. ಹಿಂದೆ ಪ್ರತಿ ಯೂನಿಟ್ ಗೆ 0-100 ರ ವರೆಗೆ 4.75 ಪೈ ಇತ್ತು, 100 ರ ಮೇಲಿನ ಬಳಕೆಯ ಪ್ರತಿ ಯೂನಿಟ್ ಗೆ 7 ರೂ ಇತ್ತು. ಆದರೆ ಹೊಸ ದರದ ಪ್ರಕಾರ ಇಂದಿನಿಂದ 100 ಯೂನಿಟ್ ಮೇಲಿನ ಬಳಕೆ ದಾರರ ಪ್ರತಿ ಯೂನಿಟ್ ಗೆ 5.90 ರೂ ಮಾತ್ರ ಪಾವತಿ ಮಾಡಬೇಕು. ಈಗಾಗಲೆ 100 ಯೂನಿಟ್ ಗಿಂತಲೂ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ನೀಡಲಾಗ್ತಿದೆ. ಈಗ ಸದ್ಯ ಹೊಸ ದರ ಪರಿಷ್ಕರಣೆ 100 ಯೂನಿಟ್ ಗಿಂತ ಹೆಚ್ಚು ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ