
ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 51.50 ರೂ. ಇಳಿಕೆ ಮಾಡಿದ್ದು, ಇದರಿಂದ ಹೋಟೆಲ್‌ಗಳು ಹಾಗೂ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಕ್ಕಂತಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,580 ರೂ. ಆಗಿದ್ದು, ಪ್ರತಿ ಸಿಲಿಂಡರ್‌ಗೆ 51.50 ರೂ.ಗಳ ಕಡಿತ ಆಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಬಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈ 51.50 ರೂ. ಇಳಿಕೆಯೊಂದಿಗೆ 1,653 ರೂ. ಆಗಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗಿರುವ 855.50 ರೂ. ಮುಂದುವರಿದಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ 5 ಕೆಜಿಗೆ 318.50 ರೂ. ಆಗಿದೆ. ವಾಣಿಜ್ಯ ಬಕೆಯ ಎಲ್‌ಪಿಜಿ ಸಿಲಿಂಡರ್ 47.5 ಕೆಜಿದಕ್ಕೆ 4,129 ರೂ. ಆಗಿದೆ. ಅಂದರೆ, ಇದರ ಬೆಲೆ 127 ರೂ. ಇಳಿಕೆಯಾಗಿದೆ.
ಆದರೆ ಗೃಹ ಬಳಕೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ದರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬಹುತೇಕ ಮಂದಿ ಗೃಹಬಳಕೆ ಸಿಲಿಂಡರ್ ದರವೂ ಕೂಡ ಕಡಿಮೆಯಾಗಲಿದೆ ಎನ್ನುವ ಭರವಸೆಯಲ್ಲಿದ್ದರು. ಜನರ ನಿರೀಕ್ಷೆಗಳು ಹುಸಿಯಾಗಿದೆ.