*ಬೆಳಗಾವಿ ಡಿಸಿ ಕಚೇರಿ ಬಳಿ ಗಲಾಟೆ ತಡೆಯಲು ಹೋದ ಕಾನ್‌ಸ್ಟೇಬಲ್ ಮೇಲೆ ಪುಂಡರಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಯುವಕರ ಎರಡು ಗುಂಪುಗಳ ನಡುವೆ ಸಾರ್ವಜನಿಕವಾಗಿ ಮಾರಾಮಾರಿ ನಡೆದಿದ್ದು ಜಗಳ ಬಿಡಿಸಲು ಹೋದ ಪೊಲೀಸ್ ಕಾನ್‌ಸ್ಟೇಬಲ್ ಮೇಲೆಯೇ ಪುಂಡರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಯುವಕರ ಎರಡು ಗುಂಪುಗಳ ಮಧ್ಯೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ರಸ್ತೆಯಲ್ಲೇ ಇವರು ಭೀಕರವಾಗಿ ಹೊಡೆದಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಮಾರ್ಕೇಟ್ ಪೊಲೀಸ್ ಠಾಣೆಯ ಪೇದೆ ಮಲ್ಲಿಕಾರ್ಜುನ ಗುಂಜೀಕರ ಅವರು ತಕ್ಷಣವೇ … Continue reading *ಬೆಳಗಾವಿ ಡಿಸಿ ಕಚೇರಿ ಬಳಿ ಗಲಾಟೆ ತಡೆಯಲು ಹೋದ ಕಾನ್‌ಸ್ಟೇಬಲ್ ಮೇಲೆ ಪುಂಡರಿಂದ ಹಲ್ಲೆ*