Latest

ಮರು ಮೌಲ್ಯಮಾಪನ: ರೋಶನಿ ತೇಜಸ್ವಿ ರಾಜ್ಯಕ್ಕೆ ದ್ವಿತೀಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಡಿವೈನ್ ಪ್ರೊವಿಡೆನ್ಸ್ ಹೈಸ್ಕೂಲಿನ ವಿದ್ಯಾರ್ಥಿನಿ ರೋಶನಿ ತೇಜಸ್ವಿ ಎಸ್ಎಸ್ಎಲ್ ಸಿಯಲ್ಲಿ ಈಗ ರಾಜ್ಯಕ್ಕೇ ಎರಡನೇ ಸ್ಥಾನಕ್ಕೇರಿದ್ದಾಳೆ.
ಮರುಮೌಲ್ಯಮಾಪನದಿಂದಾಗಿ ರೋಶನಿ ಅಂಕ 622ರಿಂದ 624ಕ್ಕೆ ಏರಿದೆ. 622 ಇದ್ದಾಗಲೇ ಅವಳು ಬೆಳಗಾವಿ ಜಿಲ್ಲೆಗೆ ಮೊದಲ ಸ್ಥಾನ ಮತ್ತು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಳು. ಇದೀಗ ಕನ್ನಡ ಮತ್ತು ವಿಜ್ಞಾನ ವಿಷಯದ ಮರುಮೌಲ್ಯಮಾಪನದಿಂದಾಗಿ ಅವಳಿ ತಲಾ ಒಂದೊಂದು ಅಂಕ ಏರಿಕೆಯಾಗಿದೆ.
 ರೋಶನಿ ಖ್ಯಾತ ನೇತ್ರ ತಜ್ಞ ಡಾ.ಟಿ.ಎಸ್.ತೇಜಸ್ವಿ ಮತ್ತು ಸ್ತ್ರೀರೋಗ ತಜ್ಞೆ ಡಾ.ರಾಜಿ ತೇಜಸ್ವಿ ಅವರ ಪುತ್ರಿ. 

Related Articles

Back to top button