Latest

SSLC, PUC ಪಾಸಾದವರಿಗೂ ಸರಕಾರಿ ಉದ್ಯೋಗಾವಕಾಶ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಎಸ್ ಎಸ್ ಎಲ್ ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೂ ಸರ್ಕಾರಿ ನೌಕರಿಯ ಅವಕಾಶವೀಗ ತೆರೆದುಕೊಂಡಿದೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಈ ನೇಮಕಾತಿ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನಾಂಕವಾಗಿದೆ.

ಈ ಮೂಲಕ ಲೋವರ್ ಡಿವಿಷನ್ ಕ್ಲರ್ಕ್, ಪೇಂಟರ್, ಡ್ರಾಟ್ಸ್ ಮನ್, ಕುಕ್, ಫೈರ್ ಮ್ಯಾನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ಒಟ್ಟು 251 ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದ್ದು ಆಸಕ್ತರು ತಮ್ಮ ಅರ್ಹತೆಗೆ ಅನುಸಾರವಾಗಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 182 ಹುದ್ದೆಗಳು
ಲೋವರ್ ಡಿವಿಷನ್ ಕ್ಲರ್ಕ್ – 27 ಹುದ್ದೆಗಳು
ಪೇಂಟರ್ – 1 ಹುದ್ದೆ
ಡ್ರಾಫ್ಟ್ಸ್ಮ್ಯಾನ್ – 1 ಹುದ್ದೆ
ಸಿವಿಲ್ ಮೋಟಾರ್ ಡ್ರೈವರ್ – 8 ಹುದ್ದೆ
ಪ್ರಿಂಟರ್ – 1 ಹುದ್ದೆ
ಸಿನಿಮಾ ಪ್ರೊಜೆಕ್ಷನಿಸ್ಟ್ – 1 ಹುದ್ದೆ
ಕುಕ್ – 12 ಹುದ್ದೆಗಳು
ಫೈರ್ಮ್ಯಾನ್ – 10 ಹುದ್ದೆಗಳು
ಕಮ್ಮಾರ – 1 ಹುದ್ದೆ
ಬೇಕರ್ – 2 ಹುದ್ದೆಗಳು
ಸೈಕಲ್ ರಿಪೇರಿ – 5 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ- 251.

Home add -Advt

ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಅಂಕಪಟ್ಟಿಗಳ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಎನ್ ಡಿಎ ಯ ಅಧಿಕೃತ ವೆಬ್ ಸೈಟ್ ಗೆ  ndacivrect.gov.in ಗೆ ಭೇಟಿ ನೀಡಿ, ಆನ್ ಲೈನ್ ನಲ್ಲಿ ಫಾರ್ಮ್  ಭರ್ತಿ ಮಾಡಬೇಕು. ಜ. 20 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

18 ರಿಂದ 27 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಲ  ಹುದ್ದೆಗಳಿಗೆ ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸ್ಕ್ರೀನ್ ಟೆಸ್ಟ್ ಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಒಟ್ಟು ಖಾಲಿ ಹುದ್ದೆಗಳ 10 ಪಟ್ಟು ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.

ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ 

https://pragati.taskdun.com/applications-called-for-junior-telecom-officer-posts/

ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿ; ಸಿಎಂ ಬೊಮ್ಮಾಯಿ ಹೇಳಿದ್ದೇನು?

https://pragati.taskdun.com/enactment-of-love-jihad-prohibition-act-what-did-cm-bommai-say/

ಚಿತ್ರದುರ್ಗ‌ ಮುರುಘಾ ಶ್ರೀ‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಅತ್ಯಾಚಾರ ‌ನಡೆದೇ‌ ಇಲ್ಲ ಅಂತಿದೆ ವೈದ್ಯಕೀಯ ವರದಿ

https://pragati.taskdun.com/big-twist-in-the-case-of-chitradurga-muruga-shri-medical-report-says-there-was-no-rape/

Related Articles

Back to top button