Karnataka News

*ಸಿಗರೇಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್*

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ:

ಸಿಗರೇಟ್ ಪ್ಯಾಕ್‍ಗಳ ಮೇಲೆ ಸಿಗರೇಟ್ ಸೇವನೆಯಿಂದಾಗುವ ಭೀಕರ ಆರೋಗ್ಯ ಸಮಸ್ಯೆಗಳ ಬಗ್ಗೆ ದೊಡ್ಡದಾದ ಚಿತ್ರ ಅಳವಡಿಸಿದರೂ ಸಿಗರೇಟ್ ಧಂ ಎಳೆಯುವವರ ಸಂಖ್ಯೆ ಏನೂ ಕಡಿಮೆಯಾಗಿಲ್ಲ.

 

ತಂಬಾಕು ಬಳಕೆಯ ನಿಯಂತ್ರಣಕ್ಕೆ ಚಿಂತೆಗೀಡಾಗಿರುವ ಕೇಂದ್ರ ಸರಕಾರ ಇದೀಗ ಚಿಲ್ಲರೆ ಸಿಗರೇಟ್ ಮಾರಾಟವನ್ನೇ ಬಂದ್ ಮಾಡುವ ಮೂಲಕ ಹೊಸ ಹೆಜ್ಜೆಯಿಡಲು ಚಿಂತನೆ ನಡೆಸಿದೆ.

ಸಿಗರೇಟ್ ಬಿಡಿಬಿಡಿಯಾಗಿ ದೊರೆಯುವ ಕಾರಣಕ್ಕೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಬಹಳಷ್ಟು ಜನರಿಗೆ ಸುಲಭದಲ್ಲಿ ಕೈಗೆಟಕುವ ಮಾದಕ ವಸ್ತುವಾಗಿ ಪರಿಣಮಿಸಿದೆ. ಹಾಗಾಗಿ ಸಿಗರೇಟ್‍ನ ಚಿಲ್ಲರೆ ಮಾರಾಟವನ್ನೇ ಬಂದ್ ಮಾಡಿದರೆ ಪರಿಣಾಮಕಾರಿಯಾಗಿ ನಿಂತ್ರಿಸಬಹುದು ಎಂಬುದು ಸರಕಾರದ ಚಿಂತನೆಯಾಗಿದೆ.

ಕೇಂದ್ರ ಸರಕಾರದ ಸ್ಟ್ಯಾಂಡಿಂಗ್ ಕಮೀಟಿ ಸಿಗರೇಟ್ ನಿಯಂತ್ರಣಕ್ಕೆ ವಿವಿಧ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿ ಹಲವು ಸಲಹೆಗಳು ಕೇಳಿ ಬಂದವು. ಅದರಲ್ಲಿ ಚಿಲ್ಲರೆ ಸಿಗರೇಟ್ ಮಾರಾಟ ಬ್ಯಾನ್ ಮಾಡುವ ಸಲಹೆಯನ್ನು ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.

*BREAKING NEWS: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢ*

https://pragati.taskdun.com/karnata1st-zika-virus5-yers-girlraichurmanvi/

 

 

https://pragati.taskdun.com/belagavibasana-gowdapatil-yatnalcabinet-extantionreaction/

*ಪ್ರಧಾನಿ ಮೋದಿ ಹತ್ಯೆ ಮಾಡಿ ಎಂದ ಕಾಂಗ್ರೆಸ್ ನಾಯಕ*

https://pragati.taskdun.com/congress-leader-raja-pateriacontroversial-statementpm-narendra-modifir-file/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button