
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎರಡು ಗುಂಪಿನ ನಡೆವೆ ಗಲಾಟೆ ಸಂಭವಿಸಿ ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಪಂ ಕಚೇರಿಗೆ ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ನಿನ್ನೆ ಗ್ರಾಪಂನಲ್ಲಿ ಎರಡು ಗುಂಪುಗಳ ಮಧ್ಯೆ ತೀವ್ರ ಗಲಾಟೆ ಆಗಿದೆ, ಅದೇ ವಿಚಾರಕ್ಕೆ ತಡರಾತ್ರಿ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ. ತಡರಾತ್ರಿ ಆಗಮಿಸಿದ್ದ ಕಿಡಿಗೇಡಿಗಳು ಬಿಯರ್ ಬಾಟಲ್ ನಲ್ಲಿ ಪೆಟ್ರೋಲ್ ಸುರಿದು ಬಟ್ಟೆ ಹಾಕಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮ ಪಂಚಾಯತಿಗೆ ಬೆಂಕಿ ಹಚ್ಚಿ ಸಿಸಿಟಿವಿ ಕ್ಯಾಮೆರಾ ತೆಗೆದುಕೊಂಡ ಹೋಗಿರುವ ಆರೋಪ ಕೂಡ ಕೇಳಿ ಬಂದಿದ್ದು,ಸಾಕ್ಷಿ ನಾಶ ಮಾಡಲು ಸಿಸಿಟಿವಿ ಕ್ಯಾಮೆರಾಗಳನ್ನೇ ಕಿತ್ತುಕ್ಕೊಂಡು ಹೋಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ