ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಲಘು ಉದ್ಯೋಗ ಭಾರತಿ ಹಾಗೂ ಐಎಂಎಸ್ ಫೌಂಡೇಷನ್ವತಿಯಿಂದ ನ. ೧೧ರಿಂದ ಮೂರು ದಿನಗಳ ಕಾಲ ಗ್ರಾಮ ಶಿಲ್ಪಿ ಮೇಳ ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಲಘು ಉದ್ಯೋಗ ಭಾರತಿಯ ಕರ್ನಾಟದ ಅಧ್ಯಕ್ಷ ಸಚಿನ್ ಸಬನೀಸ್ ತಿಳಿಸಿದ್ದಾರೆ.
ಗ್ರಾಮೀಣ ಕರಕುಶಲ ಕಲೆಗಳು ಆಧುನಿಕತೆಯ ಭರಾಟೆಯಲ್ಲಿ ನಶಿಸುತ್ತಿವೆ. ಹಾಗಾಗಿ ಗ್ರಾಮೀಣ ಕರಕುಶಲಕರ್ಮಿಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿಮೇಳ ಆಯೋಜಿಸಲಾಗಿದೆ. ಕಟ್ಟಿಗೆ ಉತ್ಪನ್ನ, ಕಲ್ಲಿನ ಉತ್ಪನ್ನ, ಲೋಹದಿಂದ ಮಾಡಿದ ವಸ್ತುಗಳು, ಮಣ್ಣಿನ ಉತ್ಪನ್ನಗಳು, ಖಾದಿ, ಕೈಮಗ್ಗ, ಹ್ಯಾಂಡಿಕ್ರಾಫ್ಟ್, ಗೋವುಗಳ ಉತ್ಪನ್ನ, ಚರ್ಮದಿಂದ ಸಿದ್ಧಪಡಿಸಿದ ವಸ್ತುಗಳು, ನಾಟಿ ಔಷಧಗಳು, ಪಾರಂಪರಿಕ ಆಟಕೆ ಮತ್ತು ಸಂಗೀತ ವಾದ್ಯಗಳು ಸೇರಿದಂತೆ ೧೨ ವಿಭಾಗಗಳ ವಸ್ತುಗಳು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದರು.
ಮೇಳದಲ್ಲಿ ೨೦೦ ಮಳಿಗೆಗಳನ್ನು ತೆರೆಯಲಾಗುವುದು. ಎಲ್ಲ ಗ್ರಾಮೀಣ ಕರಕುಶಕರ್ಮಿಗಳಿಗೂ ಉಚಿತವಾಗಿ ಮಳಿಗೆ ನೀಡಲಾಗುತ್ತದೆ. ಉತ್ತರ ಕರ್ನಾಟಕದ ಗ್ರಾಮೀಣ ಉತ್ಪನ್ನಗಳಿಗೆ ಆದ್ಯತೆ ನೀಡಲಾಗುವುದು. ಅಲ್ಲದೇ, ಮಧ್ಯಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಿಂದಲೂ ಗ್ರಾಮೀಣ ಕರಕುಶಲಕರ್ಮಿಗಳು ಬರಲಿದ್ದಾರೆ ಎಂದರು.
ವಿಶೇಷ ಸೇವೆ ಸಲ್ಲಿಸಿದ ಕರಕುಶಲ ಕರ್ಮಿಗಳನ್ನು ಸನ್ಮಾನಿಲಾಗುವುದು. ಅಲ್ಲದೇ ಪ್ರತಿ ದಿನ ಸಂಜೆ ಜಾನಪದ ನೃತ್ಯ, ಸಂಗೀತ ಮೊದಲಾದ ಮನೋರಂಜನೆ ಕಾರ್ಯಕ್ರಮ, ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ನ.೧೧ರಂದು ಬೆಳಗ್ಗೆ೧೧ ಗಂಟೆಗೆ ಸಚಿವರಾದ ಹಾಲಪ್ಪ ಆಚರ್, ಶಂಕರ ಬಿ. ಪಾಟೀಲ ಮುನೇನಕೊಪ್ಪ ಮೇಳ ಉದ್ಘಾಟಿಸಲಿದ್ದಾರೆ. ಆರ್‌ಎಸ್‌ಎಸ್ ಸಹ ಪ್ರಾಂತ ಸಂಘಟಕ ಅರವಿಂದರಾವ್ ದೇಶಪಾಂಡೆ ಅಧ್ಯಕ್ಷತೆ ವಹಿಸುವರು. ಬೆಳಗಾಮ್ ಫೌಂಡರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರೆ, ಜವಳಿ ಸಚಿವಾಲಯದ ಅಭಿವೃದ್ಧಿ ಆಯುಕ್ತ ಶಾಂತಮನು, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಪಾಲ್ಗೊಳ್ಳುವರು.
ಗ್ರಾಮ ಶಿಲ್ಪಿ ಮೇಳದ ಕುರಿತು ಹೆಚ್ಚಿನ ಮಾಹಿತಿಗೆ ಮೊ.೯೯೧೬೬೭೮೩೩೭, ೯೯೮೬೦೪೮೬೬೯ ಸಂಪರ್ಕಿಸಬಹುದು ಎಂದು ತಿಳಿಸಿದರು.
ಲಘು ಉದ್ಯೋಗ ಭಾರತಿಯ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ದಯಾನಂದ ನೇತಾಲ್ಕರ, ಕಾರ್ಯದರ್ಶಿ ಶ್ರೀಧರ ಉಪ್ಪಿನ, ಪ್ರಿಯಾ ಪುರಾಣಿಕ, ಗುರುದತ್ತ ಕುಲಕರ್ಣಿ ಇದ್ದರು.
ವಸತಿ ಶಾಲೆ ಮಕ್ಕಳೊಂದಿಗೆ ಕೆಲ ಹೊತ್ತು ಜಾಲಿಯಾಗಿ ಕಳೆೆದ CM
https://pragati.taskdun.com/latest/the-cm-spent-some-time-with-the-residential-school-children/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ