Karnataka News

*ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಪೋಟ: ವಾಹನಗಳು ಬೆಂಕಿಗಾಹುತಿ*

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ರಾಮತೀರ್ಥ ನಗರದ ಮಲ್ಲೇಶ ಹೊನ್ನೂರ ಎಂಬುವವರ ಮನೆಯ ಮುಂದಿರುವ ಟಿಸಿ ಸ್ಫೋಟಗೊಂಡು ಮನೆಯ ಮುಂದಿರುವ ಕಾರು, ಬೈಕ್ ಬೆಂಕಿಗಾಹುತಿಯಾಗಿದೆ. ಮನೆಯ ಕೆಲ ಭಾಗಗಳು ಸಹ ಬೆಂಕಿಯಿಂದ ಹಾನಿಗೊಳಗಾಗಿದೆ.

ರಾಮತೀರ್ಥ ನಗರದ ಹಲವು ಕಡೆಗಳಲ್ಲಿ ಸುಮಾರು ವರ್ಷದಿಂದ ಹಿಂದೆ ಅಳವಡಿಸಿರುವ ಟಿಸಿಗಳೆ ಇವೆ ಅವುಗಳು ಕೂಡಾ ದುರಸ್ತಿಯಲ್ಲಿದ್ದು ಜನರು ಭಯದಿಂದ ಬದುಕುವ ವಾತಾವರಣ ಉಂಟಾಗಿದೆ.

 

ನಗರದಲ್ಲಿ ಹೀಗೆ ಹಲವಾರು ಟಿಸಿಗಳು ದುರಸ್ಥಿಯಲ್ಲಿದ್ದು ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಟಿಸಿ ಸರಿಪಡಿಸಿದ್ದರೆ ಅಥವಾ ಬದಲಾವಣೆ ಮಾಡಿದ್ದರೆ ಈಗಾಗಿರುವ ಅನಾಹುತ ತಪ್ಪಿಸಬಹುದಿತ್ತು.

Home add -Advt

 

ಮನವಿ ಸಲ್ಲಿಸಿದರು ಸಂಬಂಧಪಟ್ಟ ಅಧಿಕಾರಿಗಳು ಟಿಸಿ ಬದಲಾವಣೆ ಮಾಡದಿರುವುದು ಅವರ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಈ ಅನಾಹುತಕ್ಕೆ ಅಧಿಕಾರಿಗಳೇ ಮೂಲ ಕಾರಣ. ಅವರ ಮೇಲೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

 

ಇನ್ನಾದರು ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ಥಿಯಲ್ಲಿರುವ ಟಿಸಿಗಳನ್ನು ಸರಿಪಡಿಸಿ ಅಥವಾ ಬದಲಾವಣೆ ಮಾಡಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕೆಂಬುದು ಸಾರ್ವಜನಿಕರ ಮಾತಾಗಿದೆ.

 

ಇಲ್ಲಿಯ ಟಿಸಿ ತುಂಬಾ ದಿನದಿಂದ ದುರಸ್ತಿಯಲ್ಲಿತ್ತು. ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಗುರುವಾರ ಮಧ್ಯಾಹ್ನ ವಿದ್ಯುತ್ ಸರ್ಕ್ಯೂಟ್ ನಿಂದಾಗಿ ಟಿಸಿ ಬೆಂಕಿಗಾಹುತಿಯಾಗಿ ಸುಮಾರು ಒಂದು ಗಂಟೆಗಳ ಕಾಲ ಬೆಂಕಿ ಉರಿದಿದೆ.

 

ಅಲ್ಲಿರುವ ಕಾರು ಬೈಕ್ ಕೋಡಾ ಬೆಂಕಿಗಾಹುತಿಯಾಗಿದೆ, ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರು ಜೀವ ಹಾನಿ ಹಾಗುವ ಸಾಧ್ಯತೆ ಇತ್ತು. ಈಗಾಗಿರುವ ಹಾನಿಗೆ ಹೆಸ್ಕಾಂ ಅಧಿಕಾರಿಗಳೆ ಕಾರಣ. ಹಾಗಾಗಿ ನಷ್ಟವನ್ನು ಅವರೆ ತುಂಬಬೇಕು ಎಂದು ಮಲ್ಲೇಶ ಹೊನ್ನೂರ ಆಗ್ರಹಿಸಿದ್ದಾರೆ.

56 ಲಕ್ಷ ರೂ. ವೆಚ್ಚದಲ್ಲಿ ಹಲಗಾ ಗ್ರಾಮದ ರಸ್ತೆಗಳ ಅಭಿವೃದ್ಧಿ

Related Articles

Back to top button