ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಹೊಸ ವರ್ಷದ ಪಾರ್ಟಿಗಾಗಿ ಹಣ ನೀಡಿಲ್ಲ ಎಂದು ಕೋಪಗೊಂಡ ಯುವಕನೊಬ್ಬ ಅಜ್ಜಿಯನ್ನೇ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯ ಶಾಹ್ದಾರಾದಲ್ಲಿ ನಡೆದಿದೆ.
19 ವರ್ಷದ ಕರಣ್ ಅಜ್ಜಿಯನ್ನೇ ಹತ್ಯೆಗೈದ ಆರೋಪಿ. ಕರಣ್, ಹೊಸ ವರ್ಷಕ್ಕೆ ಪಾರ್ಟಿ ಮಾಡಲು ಹಣ ಕೊಡುವಂತೆ ಅಜ್ಜಿಯನ್ನು ಕೇಳಿದ್ದಾನೆ. ಆದರೆ ಅಜ್ಜಿ ಹಣ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಕೋಪದಿಂದ ಸುತ್ತಿಗೆಯಿಂದ ಅಜ್ಜಿಯನ್ನು ಹೊಡೆದು 18 ಸಾವಿರ ರೂ.ಕದ್ದು ಪರಾರಿಯಾಗಿದ್ದಾನೆ.
ಅಜ್ಜಿ ರೂಮಿನಿಂದ ಎಷ್ಟು ಹೊತ್ತಾದರೂ ಹೊರಬರದಿರುವುದನ್ನು ಗಮನಿಸಿ, ಮನೆಯವರು ರೂಮಿಗೆ ಹೋಗಿ ನೋಡಿದಾಗ ಅಜ್ಜಿ ಕುರ್ಚಿಯಲ್ಲೇ ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ. ಸುತ್ತಿಗೆಯಿಂದ ಹೊಡೆದ ಪರಿಣಾಮ ಅಜ್ಜಿಯ ತಲೆ ಒಡೆದಿದೆ. ಸದ್ಯ ಆರೋಪಿ ಕರಣ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ