
ಪ್ರಗತಿವಾಹಿನಿ ಸುದ್ದಿ: ಗ್ರ್ಯಾನೈಟ್ ಕ್ವಾರಿ ಕುಸಿದು 6 ಜನ ಕಾರ್ಮಿಕರು ಮೃತಪಟ್ಟಿರುವ ಘಟನೆ ಬಲ್ಲಿಕುರುವ ಬಳಿ ನಡೆದಿದೆ.
ಆಂಧ್ರಪ್ರದೇಶದ ಬಾಪಾಟ್ಲಾ ಜಿಲ್ಲೆಯ ಬಲ್ಲಿಕುರುವ ಬಳಿ ಸತ್ಯಕೃಷ್ಣ ಗ್ರ್ಯಾನೈಟ್ ಕ್ವಾರಿ ಏಕಾಏಕಿ ಕುಸಿದಿದ್ದು, 6 ಜನರು ಸಾವನ್ನಪ್ಪಿದ್ದಾರೆ. 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವೇಳೆ 16 ಜನರು ಸ್ಥಳದಲ್ಲಿ ಇದ್ದರು. ಬಂಡೆಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಗಾಯಾಳುಗಳನ್ನು ನರಸರಾವ್ ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




