ಪೆಟ್ಟೆ
ಇದು ಒಂದು ಬಗೆಯ ಗ್ರೇವಿ. ಇದು ಅಕ್ಕಿ ರೊಟ್ಟಿ, ಚಪಾತಿ, ಅನ್ನದ ಜೊತೆಯೂ ರುಚಿಯಾಗಿರುತ್ತೆ.
ಬೇಕಾದ ಸಾಮಗ್ರಿಗಳು:
ಅಕ್ಕಿ ಕಾಲು ಕಪ್, ಹಸಿ ಕೊಬ್ಬರಿ 1ಕಪ್, 5-6 ಕೆಂಪು ಮೆಣಸು, ಹುಣಸೆಹಣ್ಣು ಅರ್ಧ ನಿಂಬೆ ಗಾತ್ರ,ಬೆಳ್ಳುಳ್ಳಿ 15 ಎಸಳು, ಜೀರಿಗೆ 1 ಚಮಚ, ಕುತ್ತುಂಬ್ರಿ ಅರ್ಧ ಚಮಚ, ಕಡಲೆ ಗಾತ್ರದ ಇಂಗು, ರುಚಿಗೆ ಉಪ್ಪು ಕೆಂಪುಹರಿವೆ ಸೊಪ್ಪು 1ಕಟ್ಟು. ಒಗ್ಗರಣೆಗೆ ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಹರಿವೆ ಸೊಪ್ಪನ್ನು ಚನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿ ಪಲ್ಯದ ರೀತಿ ಬೇಯಿಸಬೇಕು.
ಅಕ್ಕಿ ಜೀರಿಗೆ,ಕುತ್ತುಂಬ್ರಿ , ಮೆಣಸು ಹಾಕಿ ಚನ್ನಾಗಿ ಹುರಿಯ ಬೇಕು.ಅಕ್ಕಿ ಹೊಂಬಣ್ಣ ಬಂದಮೇಲೆ ಬೆಳ್ಳುಳ್ಳಿ ಇಂಗುಸೇರಿಸಿ ಸ್ವಲ್ಪ ಹುರಿಯ ಬೇಕು, ಇದಕ್ಕೆ ಹುಣಸೆ ಹಣ್ಣು ಕೊಬ್ಬರಿ ತುರಿ ಸೇರಿಸಿ ರುಬ್ಬ ಬೇಕು. ಬೇಯಿಸಿದ ಹರುವೆ ಸೊಪ್ಪಿಗೆ ರುಬ್ಬಿದ ಮಸಾಲೆ ಹಾಕಿ ಕುದಿಸಬೇಕು ರುಚಿಗೆ ಉಪ್ಪು ಸೇರಿಸಬೇಕು. ಕೊನೆಯದಾಗಿ ಒಗ್ಗರಣೆ ಕೊಡಿ. ರುಚಿಕರವಾದ ಪೆಟ್ಟೆ ಸವಿಯಲು ತಯಾರಾಗಿದೆ.
-ಸಹನಾ ಭಟ್, ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ