ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವರು,ಗೃಹಜ್ಯೋತಿ ಯೋಜನೆಯಡಿ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್. ಉಚಿತ ವಿದ್ಯುತ್ ಪಡೆಯಲು ಸ್ವಂತ ಮನೆಯಿರಲಿ, ಬಾಡಿಗೆ ಮನೆಯಿರಲಿ ಕರಾರುಪತ್ರ ಅಗತ್ಯ. ಕರಾರುಪತ್ರವಿಲ್ಲದಿದ್ದರೆ ವೋಟರ್ ಐಡಿ ಬೇಕಾಗುತ್ತದೆ. 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರು 2.16 ಕೋಟಿ ಜನರಿದ್ದಾರೆ. ಗೃಹಜ್ಯೋತಿ ಯೋಜನೆ ಲಾಭ ಪಡೆದುಕೊಳ್ಳಲು ಸೇವಾಸಿಂಧು ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಇಲ್ಲವೇ ಬೆಸ್ಕಾಂ ಸಿದ್ಧಪಡಿಸುತ್ತಿರುವ ಗೃಹಜ್ಯೋತಿ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆಧಾರ್ ಸಂಖ್ಯೆ, ಆರ್.ಆರ್. ಸಂಖ್ಯೆ ಲಿಂಕ್ ಮಾಡಬೇಕು. ಜೂನ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದರು.
ಜುಲೈ ತಿಂಗಳ ಬಿಲ್ ಆಗಸ್ಟ್ ನಲ್ಲಿ ಪಾವತಿ ಮಾಡುವುದು ಬೇಡ.2 ಲಕ್ಷ ಗ್ರಾಹಕರು ಮಾತ್ರ 200ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಾರೆ. 2 ಕೋಟಿ 16ಲಕ್ಷ ಗ್ರಾಹಕರು ಈ ಯೋಜನೆ ಲಾಭ ಪಡೆಯಲಿದ್ದಾರೆ.
https://pragati.taskdun.com/bellary-asm-womens-collegecollege-principalsexual-harassment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ