*ಮದುವೆಗೆ ಮೂರು ದಿನವಿರುವಾಗ ಪರಾರಿಯಾದ ವರ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅದ್ಧೂರಿ ಮದುವೆಗಾಗಿ ಎರಡೂ ಕುಟುಂಬದವರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರೆ ಇತ್ತ ಮದುವೆಗೆ ಮೂರು ದಿನ ಇರುವಾಗ ವರ ಮಹಾಶಯ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವರ ನಾಗರಾಜ್ ನಾಪತ್ತೆಯಾಗಿರುವವರು. ನವೆಂಬರ್ 21ರಂದು ವಿವಾಹ ನಡೆಯಬೇಕಿತ್ತು. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ನಾಗರಾಜ್ ಮದುವೆ ನಿಗದಿಯಾಗಿತ್ತು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಾಳಾವಿ ಗ್ರಾಮದ ನಿವಾಸಿಯಾಗಿರುವ ನಾಗರಾಜ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಈಗ ಮೂರು ದಿನವಿರುವಾಗ ನಾಪತ್ತೆಯಾಗಿದ್ದಾರೆ. ನ.17ರಿಂದಲೇ ನಾಗರಾಜ್ ಪತ್ತೆಯಿಲ್ಲ ಎನ್ನಲಾಗಿದೆ. … Continue reading *ಮದುವೆಗೆ ಮೂರು ದಿನವಿರುವಾಗ ಪರಾರಿಯಾದ ವರ*