Kannada NewsKarnataka NewsLatest

*ಮದುವೆಗೆ ಮೂರು ದಿನವಿರುವಾಗ ಪರಾರಿಯಾದ ವರ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅದ್ಧೂರಿ ಮದುವೆಗಾಗಿ ಎರಡೂ ಕುಟುಂಬದವರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರೆ ಇತ್ತ ಮದುವೆಗೆ ಮೂರು ದಿನ ಇರುವಾಗ ವರ ಮಹಾಶಯ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ವರ ನಾಗರಾಜ್ ನಾಪತ್ತೆಯಾಗಿರುವವರು. ನವೆಂಬರ್ 21ರಂದು ವಿವಾಹ ನಡೆಯಬೇಕಿತ್ತು. ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ನಾಗರಾಜ್ ಮದುವೆ ನಿಗದಿಯಾಗಿತ್ತು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಾಳಾವಿ ಗ್ರಾಮದ ನಿವಾಸಿಯಾಗಿರುವ ನಾಗರಾಜ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಈಗ ಮೂರು ದಿನವಿರುವಾಗ ನಾಪತ್ತೆಯಾಗಿದ್ದಾರೆ.

Home add -Advt

ನ.17ರಿಂದಲೇ ನಾಗರಾಜ್ ಪತ್ತೆಯಿಲ್ಲ ಎನ್ನಲಾಗಿದೆ. ವರ ನಾಗರಾಜ್ ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದ. ಸಂಬಂಧಿಯೊಬ್ಬರ ಸಾವಾಗಿದೆ, ಮದುವೆ ಮುಂದೂಡೋಣ ಎಂದು ನಾಗರಾಜ್ ಹೇಳಿದ್ದ. ಆದರೆ ವಧು ಹಾಗೂ ಕುಟುಂಬದವರು ದೂರದ ಸಂಬಂಧಿಗೆ ಅಷ್ಟು ಮಹತ್ವ ಏಕೆ? ಮದುವೆ ಮುಂದೂಡಲು ಸಾಧ್ಯವಿಲ್ಲ ಎಂದಿದ್ದರು. ವಧು ಹೀಗೆ ಹೇಳುತ್ತಿದ್ದಂತೆ ವರ ಮಹಾಶಯ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ವಧು ಹಾಗೂ ಆಕೆಯ ಪೋಷಕರು ಬನಶಂಕರಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.


Related Articles

Back to top button