Belagavi NewsBelgaum NewsKannada NewsKarnataka News

*ಬೈಲಹೊಂಗಲ ತಾಲೂಕು ಬರಗಾಲ ಪ್ರದೇಶ ಎಂದು ಘೋಷಿಸಲು ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಅನೇಕ ತಾಲೂಕೂಗಳು ಬರಗಾಲದಲ್ಲಿವೆ ಎಂಬ ಉಪಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಹಾಗೂ ರಾಜ್ಯದ ಮಳೆಯಾಧಾರಿತ ತಾಲೂಕುಗಳಲ್ಲಿ ಕಡಿಮೆ ಮಳೆ ಕೊರತೆಯಲ್ಲಿ ಬೈಲಹೊಂಗಲವನ್ನು ಇಟ್ಟಿರುವುದು ಸರಿಯಲ್ಲ. ಹಾಗಾಗಿ  ಬರಗಾಲ ಪ್ರದೇಶದಲ್ಲಿ ಸೇರಿಸಬೇಕೆಂದು ರಾಜ್ಯ ಭಾರತೀಯ ಕೃಷಿಕ‌ ಸಮಾಜ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಆಗ್ರಹಿಸಿದ್ದಾರೆ.

ಇಂದು ಬೈಲಹೊಂಗಲ ತಾಲೂಕಿನ ಉಪವಿಭಾಗಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದ ಅವರು,

Home add -Advt

ಅನೇಕ ಹಳ್ಳಿಗಳಲ್ಲಿ ಬಿತ್ತನೆ ಅಗಿಲ್ಲ. ಬಿತ್ತನೆ ಮಾಡಿದ ಅಲ್ಪಸ್ವಲ್ಪ ಬೆಳೆಗಳು ಮಳೆ ಇಲ್ಲದೆ ಕಮರಿ ಹೋಗಿವೆ ಆದ್ದರಿಂದ ರಾಜ್ಯ ಸರ್ಕಾರ ಆಗಸ್ಟ್ 15ರವರೆಗೆ ಮಳೆಯ ಕೊರತೆಯನ್ನು ನೋಡಿಕೊಂಡು ಬರಗಾಲ ಪ್ರದೇಶ ಒಂದು ಘೋಷಿಸಲು ನಿರ್ಧರಿಸಿದೆ ಆದ್ದರಿಂದ ಸರ್ಕಾರ ಬರಗಾಲ ಘೋಷಣೆ ಸಮಯದಲ್ಲಿ ಬೈಲಹೊಂಗಲ ತಾಲೂಕನ್ನು ಬರ ಘೋಷಿತ ಎಂದು ಘೋಷಿಸಬೇಕು. 

ಸಾಲಬಾಧೆಯಿಂದ ತೀರಿಕೊಂಡ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಹಾಗೂ ಬರಗಾಲಕ್ಕೆ ತುತ್ತಾದ ರೈತರ ಖಾತೆಗೆ  ತಕ್ಷಣ ಸರ್ಕಾರದ ಪರಿಹಾರ ನೀಡಬೇಕು  ರೈತರ ಸಂಪೂರ್ಣ ಸಾಲ ಮನ್ನಾಮಾಡಿ ಬ್ಯಾಂಕ್ ದಿಂದ‌ ರೈತರಿಗೆ ಸಾಲದ ನೊಟಿಸ್ ಬರದಂತೆ ಕ್ರಮವಹಿಸಬೇಕೆಂದರು.

ಭಾರತೀಯ ಕೃಷಿಕಸಮಾಜ ನವದೆಹಲಿ ರಾಜ್ಯಸಂಚಾಲಕ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಉಪವಿಭಾಗದಲ್ಲಿ ಬರುವ ರಾಜ್ಯ, ಜಿಲ್ಲಾ ಮತ್ತು ತಾಲೂಕ ಹೆದ್ದಾರಿ ಹಾಗೂ ಗ್ರಾಮೀಣ ಮುಖ್ಯರಸ್ತೆಗಳು ಮತ್ತು ರೈತರು ಜಮೀನಿಗೆ ತೆರಳುವ ರಸ್ತೆಗಳನ್ನು ಕೆಲ ಪಟ್ಟ ಬದ್ಧ ಹಿತಾಸಕ್ತಿಗಳು ಅತಿಕ್ರಮಣ ಮಾಡುವುದರೊಂದಿಗೆ ಸುಗಮ ಸಂಚಾರಕ್ಕೆ ಅಪಾಯವಾಗಿ ಪರಿಣಮಿಸಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ನೆಟ್ಟಿರುವ ಗಿಡಗಳನ್ನು  ಅಗೆದು ಡಾಂಬರೀಕರಣ ರಸ್ತೆಯವರೆಗೆ  ಅತಿಕ್ರಮಣ ಮಾಡಿ ಬೆಳೆದ ಗಿಡಗಳನ್ನು ನಾಶಮಾಡುತಿದ್ಸರು ಅರಣ್ಯ ಇಲಾಖೆ ಗಾಡನಿದ್ರೆಯಲ್ಲಿದೆ. ರೈತರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರದ ಗ್ರಾಮಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳ ಪಕ್ಕದಲ್ಲಿ ಅಗೆದು ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ  ಈ ವಿಷಯ ಗಮನಿಸದ ಲೋಕೋಪಯೋಗಿ ಇಲಾಖೆ ಹಾಗು ಸಾಮಾಜಿಕ ಅರಣ್ಯ ಇಲಾಖೆಗೆ ಚಾಟಿ ಬಿಸಬೇಕಾಗಿದೆ. ಸರಕಾರ ಕೋಟ್ಯಂತರ ರೂಪಾಯಿ ಹಣದಲ್ಲಿ  ನಿರ್ಮಾಣವಾಗಿರುವ ರಸ್ತೆಗಳು ಮತ್ತು ಅರಣ್ಯ ಸಂಪತ್ತವನ್ನು ಉಳಿಸುವಲ್ಲಿ ಈ ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿವೆ ಆದ್ದರಿಂದ ತಕ್ಷಣದಿಂದ ಜಾರಿಗೆ ಬರುವ ಹಾಗೆ ರಾಜ್ಯಸರ್ಕಾರ ರಸ್ತೆಗಳ ಹದ್ದುಬಸ್ತಿ ಗುರ್ತಿಸಲು ಕ್ರಮ ಕೈಗೊಳ್ಳಬೇಕು ಎಂದು‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ  ಶಂಕರ ಕುದುರಿ ಮಡಿವಾಳಪ್ಪ  ಪೇಂಟೆದ ಬಸವರಾಜ ಹೋಂಡದ ಬಸವರಾಜ್ ಬೆಳವಡಿ ಸಂತೋಷ ರೇಣಕೆ ಮಂಜು ಪತ್ತಾರ್ ಜ್ಞಾನೇಶ್ವರ್ ಮಡಿವಾಳ  ಮುಗಬಸಪ್ಪ  ಬನವಣ್ಣವರ ಸಂಗಪ್ಪ ಬಸಟ್ಟಿ ವಿಠ್ಠಲ್ ಬೆಣ್ಣಿ ಮಲ್ಲಿಕಾರ್ಜುನ್ ಜಳ್ಳಿ ಬಸವರಾಜ್ ಕುದುರಿ ನಾಗಯ್ಯ ಪೂಜಾರ ಮೂಗಬಸಪ್ಪ ಮಗನೂರ  ರಾಜು ಸಿಂಗಾರಗೊಪ್ಪ ಪರಶು ಬೆಣ್ಣಿ

 ಗೂಳಪ್ಪ ಹೊಳಿ, ಮಡಿವಾಳಪ್ಪ ಚಿಕ್ಕೊಪ್ಪ ಸೇರಿದಂತೆ ಅನೇಕ‌ರೈತ ಪ್ರತಿನಿಧಿಗಳು ಇದ್ದರು.

Related Articles

Back to top button