Vikalachetanara Day
Cancer Hospital 2
Bottom Add. 3

*ಡಿಜಿಟಲೀಕರಣ ಮತ್ತು ಎಐ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಸಮರ್ಥ ಸಾಧನಗಳನ್ನು ಕಾರ್ಯಗತಗೊಳಿಸಬೇಕು; ಡಾ. ರವೀಂದ್ರ ಕುಲಕರ್ಣಿ ಕರೆ*

ಕೆಎಲ್ಇ ಸಂಸ್ಥೆಯ 108 ನೆ ಸಂಸ್ಥಾಪನಾ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎಐ ತಂತ್ರಜ್ಞಾನ ಸಾಕಷ್ಟು ಬದಲಾವಣೆ ತರುತ್ತಿದ್ದು, ಈ ದಶಕವು ತಂತ್ರಜ್ಞಾನ ಆಧಾರಿತವಾಗಿರಲಿದೆ. ಡಿಜಿಟೈಲೇಶನ್ ಕ್ರಾಂತಿಯ ಫಲವಾಗಿ ಇಂದು ಆರ್ಥಿಕ ತೆಯು ಶೀಘ್ರವಾಗಿ ಬೆಳೆಯುತ್ತಿದೆ ಆದ್ದರಿಂದ ಉನ್ನತ ಶಿಕ್ಷಣದ ಮೂಲಕ ದೇಶದ ಜಿ.ಡಿ.ಪಿಗೆ ಕೊಡುಗೆ ನೀಡುವ ಯುವ ಸಾಧಕರನ್ನು ಸೃಷ್ಟಿಸಬೇಕಾಗಿದೆ ಎಂದು ಮುಂಬೈ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ರವೀಂದ್ರ ಕುಲಕರ್ಣಿ ಹೇಳಿದರು.


ಅವರು ಶನಿವಾರ ನಗರದ ಕೆ.ಎಲ್.ಇ ಸೆಂಟಿನರಿ ಕನ್ವೆನ್ಷನ್ ಸೆಂಟರ್, ಜೀರಿಗೆ ಸಭಾಂಗಣದಲ್ಲಿ ಜರುಗಿದ ಕೆಎಲ್ಇ ಸಂಸ್ಥೆಯ 108 ನೆಯ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶವು ಆತ್ಮನಿರಭರತೆಯಾಗಲು ಯುವಕರು ಉನ್ನತ ಶಿಕ್ಷಣದ ಜೊತೆಗೆ ತಂತ್ರಜ್ಞಾನ ಆಧಾರಿತ ಸಂಶೋಧನೆಯ ಸದುಪಯೋಗ ಪಡೆದುಕೊಳ್ಳಬೇಕು. ತಂತ್ರಜ್ಞಾನದ ಕ್ಷಿಪ್ರ ಒಳಹರಿವು, ವಿಶೇಷವಾಗಿ ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆಯನ್ನು ಯುವಕರು ಪರಿಣಾಮಕಾರಿ ಸದುಪಯೋಗಪಡಿಸಿಕೊಂಡು ಸಮರ್ಥ ಸಾಧನಗಳನ್ನು ಕಾರ್ಯಗತಗೊಳಿಸಬೇಕೆಂದು ಕರೆ ನೀಡಿದರು.


ಉದ್ಯಮ ಆಧಾರಿತ ಅಕಾಡೆಮಿಯ ಸಹಯೋಗವು ಅತ್ಯಂತ ಪ್ರಾಮುಖ್ಯ. ಹಳೆಯ ವಿದ್ಯಾರ್ಥಿಗಳ ಸಂಸ್ಥೆ ಸ್ಥಾಪಿಸಿ ಉದ್ಯೋಗಾಧಾರಿತ ಸಂಪರ್ಕ, ಕಲಿಕೆಯ ಅಂತರಾಷ್ಟ್ರೀಕರಣ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು.
ಕೆಎಲ್‌ಇ ಸಂಸ್ಥೆಯು ಒದಗಿಸುತ್ತಿರುವ ಬಹುಶಿಸ್ತೀಯ ಶೈಕ್ಷಣಿಕ ಸೇವೆಗಳು ಅದ್ಭುತ ಮತ್ತು ಆಶ್ಚರ್ಯಕರವಾಗಿದೆ. ಸಂಸ್ಥೆಯು ಒಂದು ಕೋಟಿ ಮೂವತ್ತು ಲಕ್ಷ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಿದ್ದು ಅತ್ಯಂತ ಶ್ಲಾಘನೀಯ. ಆರೋಗ್ಯ, ಉನ್ನತ ಶಿಕ್ಷಣದ ಮೂಲಕ ಜಾಗತಿಕ ಸಾಧನೆ ಮಾಡಿದ್ದು ಅವಿಸ್ಮರಣೀಯ. 30 ರಿಂದ 309 ಅಂಗ ಸಂಸ್ಥೆ ಸ್ಥಾಪಿಸಿದ್ದು ಸಾಧನೆಯ ಸಂತಸ ಎಂದು ಶ್ಲಾಘಿಸಿದರು.
ಕೆಎಲ್ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಏಳು ಶಿಕ್ಷಕರಿಂದ ಜನ್ಮತಾಳಿದ ಸಂಸ್ಥೆ ಇಂದು 108 ವರ್ಷಕ್ಕೆ ದಾಪುಗಾಲು ಇಟ್ಟಿರುವುದು ಹೆಮ್ಮೆ. ಸಂಸ್ಥಾಪಕರು, ದಾನಿಗಳ ತ್ಯಾಗ ಪರಿಶ್ರಮದಿಂದ ಬೆಳೆದ ಸಂಸ್ಥೆ ಇದಾಗಿದ್ದು, ಇಂದು ಜಾಗತಿಕವಾಗಿ ಬೆಳೆದು ಹೆಮ್ಮರವಾಗಿದೆ. ಆಡಳಿತ ಮಂಡಳಿ ಯಾವುದೇ ಪಕ್ಷದಲ್ಲಿದ್ದರೂ ನಿಸ್ವಾರ್ಥವಾಗಿ ಸಂಸ್ಥೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಸಂಸ್ಥೆ ಶಿಕ್ಷಣ ,ಆರೋಗ್ಯ ಕ್ಷೇತ್ರದಲ್ಲಿ ನಾವೀಣ್ಯತೆಯನ್ನು ಅಳವಡಿಸಿಕೊಂಡು ಸಾಧನೆಯ ಶಿಖರವನ್ನು ಏರಿದೆ. ಸಂಸ್ಥೆಯು ಇಂದು 309 ಅಂಗ ಸಂಸ್ಥೆ ಹೊಂದಿ ಸಾವಿರಾರು ಸಿಬ್ಬಂದಿ, ಲಕ್ಷಾಂತರ ವಿದ್ಯಾರ್ಥಿಗಳಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದರು.


ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಬಹು ಅಂಗಾಂಗ ಕಸಿ ಕೇಂದ್ರವಾಗಿ ಹೊರಹೊಮ್ಮಿದೆ. ಆರೋಗ್ಯ ರಕ್ಷಣೆ ಸಾಮರ್ಥ್ಯವು 1000 ಉಚಿತ ಹಾಸಿಗೆಗಳು ಸೇರಿದಂತೆ 5000 ಹಾಸಿಗೆಗಳನ್ನು ದಾಟಲಿದೆ. ಹುಬ್ಬಳ್ಳಿಯ ಆಸ್ಪತ್ರೆಯ ಜೊತೆಗೆ ಬೆಳಗಾವಿಯಲ್ಲಿ ನಾವು ಶೀಘ್ರದಲ್ಲೇ 300 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ. ಈಗಾಗಲೇ ಹೃದಯ, ಯಕೃತ್ತು ಮತ್ತು ಮೂತ್ರಪಿಂಡ ಕಸಿ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಶ್ವಾಸಕೋಶ ಕಸಿ ಪ್ರಾರಂಭಿಸಲಾಗುವುದು,” ಎಂದು ಅವರು ಹೇಳಿದರು.


ಈ ಸಂದರ್ಭದಲ್ಲಿ ಡಾ.ಕೋರೆ ಮತ್ತು ಮುಖ್ಯ ಅತಿಥಿ ಡಾ.ರವೀಂದ್ರ ಅವರು ಕಳೆದ ವರ್ಷ ಶೈಕ್ಷಣಿಕ, ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಸಾಧನೆಗೈದ ಕೆಎಲ್‌ಇ ಸೊಸೈಟಿಯ ವಿವಿಧ ಸಂಸ್ಥೆಗಳ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನು ಸನ್ಮಾನಿಸಿದರು. 90 ಚಿನ್ನದ ಪದಕಗಳು, 49 ಬೆಳ್ಳಿ ಪದಕಗಳು ಮತ್ತು 7 ಟ್ರೋಫಿಗಳನ್ನು ನೀಡಲಾಯಿತು. ಡಾ ಪ್ರಭಾಕರ ಕೋರೆ ಅಮೃತ ಮಹೋತ್ಸವ ಆಚರಣೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಿದ ಶಾಲಾ-ಕಾಲೇಜುಗಳಿಗೆ 8 ಟ್ರೋಫಿಗಳನ್ನು ನೀಡಲಾಯಿತು. 8 ಸಿಬ್ಬಂದಿ ಮತ್ತು 2 ನರ್ಸಿಂಗ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಮಹಾಂತೇಶ ಕೌಜಲಗಿ ವಹಿಸಿದ್ದರು. ವೇದಿಕೆ ಮೇಲೆ ಆಜೀವ ಮಂಡಳಿ ಕಾರ್ಯಾಧ್ಯಕ್ಷರಾದ ಪ್ರಸಾದ ರಾಂಪುರೆ ಹಾಜರಿದ್ದರು.


ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದಡಾ. ಎಸ್ ವಿ ಸಾಧುನವರ, ಎಸ್ ಸಿ ಮೆಟಗುಡ್, ಜಯಣ್ಣ ಮುನವಳ್ಳಿ, ಡಾ. ವಿ ಐ ಪಾಟೀಲ, ಮಹಾಂತೇಶ ಕವಟಗಿಮಠ, ವಾಯ ಎಸ್ ಪಾಟೀಲ, ಬಿ ಆರ್ ಪಾಟೀಲ, ಡಾ. ನಿತಿನ ಗಂಗಾಣೆ, ಡಾ. ಹೆಚ್ ಬಿ ರಾಜಶೇಖರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


ಈ ಕಾಲಕ್ಕೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆ.ಎಲ್.ಇ ಸಂಗೀತ ಶಾಲೆ ಸಿಬ್ಬಂದಿ ಪ್ರಾರ್ಥಿಸಿದರು. ಮಹೇಶ ಗುರನಗೌಡರ ಹಾಗೂ ನೇಹಾ ದಡೇದ ನಿರೂಪಿಸಿದರು.

Bottom Add3
Bottom Ad 2

You cannot copy content of this page