Cancer Hospital 2
Bottom Add. 3

*ಬೆಳಗಾವಿ: ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್*

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರ್ಕಾರಿ ಬಸ್ ವೊಂದು ನಡು ರಸ್ತೆಯಲ್ಲಿಯೇ ಧಗಧಗನೆ ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಾಪುರದಲ್ಲಿ ನಡೆದಿದೆ.

20 ಜನರು ಪ್ರಯಣಿಕರಿದ್ದ NWKSRTC ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬಸ್ ರಸ್ತೆ ಮಧ್ಯೆಯೇ ಉರಿಯಲಾರಂಭಿಸಿದೆ. ತಕ್ಷಣ ಬಸ್ ಚಾಲಕ ಬಸ್ ನಿಲ್ಲಿಸಿ ಪ್ರಯಣಿಕರನ್ನು ಕೆಳಗಿಳಿಸಿದ್ದಾರೆ.

ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ಸಲ್ಪದರಲ್ಲಿ ತಪ್ಪಿದೆ. ಸದ್ಯ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲಿಸರು ದೌಡಾಯಿಸಿದ್ದಾರೆ.


Bottom Add3
Bottom Ad 2

You cannot copy content of this page