Belagavi NewsBelgaum NewsElection NewsKannada NewsKarnataka NewsNationalPolitics

*ಬೆಳಗಾವಿಯ ಯುವ ಮುಖಂಡನಿಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಮಹತ್ವದ ಜವಾಬ್ದಾರಿ*

ಗೋವಾ ವಿಧಾನಸಭೆ ಚುನಾವಣೆ: AICC ಸಂಯೋಜಕರಾಗಿ ಮೃಣಾಲ್ ಹೆಬ್ಬಾಳಕರ್ ನೇಮಕ

ಬೆಳಗಾವಿ ಯುವ ಮುಖಂಡನಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಮಹತ್ವದ ಜವಾಬ್ದಾರಿ

Home add -Advt

ಪ್ರಗತಿವಾಹಿನಿ ಸುದ್ದಿ: ಮುಂಬರುವ ಗೋವಾ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ನಾಲ್ವರು ಸಂಯೋಜಕರನ್ನು ನೇಮಕ ಮಾಡಿದ್ದು, ಬೆಳಗಾವಿಯ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.

AICC ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಅವರು ಸೆ.14ರಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಗೋವಾ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಧ್ಯಮ ಸಂಬಂಧಿತ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದೆ. ನೇಮಕಗೊಂಡಿರುವ ಎಲ್ಲಾ ಸಂಯೋಜಕರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ನಿಕಟ ಸಮನ್ವಯ ಸಾಧಿಸಿ ಮಾಧ್ಯಮ ಹಾಗೂ ಪ್ರಚಾರಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇಮಕಗೊಂಡಿರುವವರು

ಮ್ಯಾಥ್ಯೂ ಆಂಟನಿ – ರಾಷ್ಟ್ರೀಯ ಮಾಧ್ಯಮ ಸಂಯೋಜಕ, 

ಮೃಣಾಲ್ ಹೆಬ್ಬಾಳಕರ್ – ಸಂಯೋಜಕ

ನಿಶಾಂತ್ ಆನಂದ್ – ಸಂಯೋಜಕ

ಅಲಿ ಮೆಹದಿ – ಸಂಯೋಜಕ

ಬೆಳಗಾವಿಯಿಂದ ರಾಷ್ಟ್ರಮಟ್ಟದ ಪಕ್ಷದ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೃಣಾಲ್ ಹೆಬ್ಬಾಳಕರ್ ಅವರಿಗೆ ಗೋವಾ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ AICC ಜವಾಬ್ದಾರಿ ನೀಡಿರುವುದು ಗಮನಾರ್ಹವಾಗಿದೆ.

ಈ ನೇಮಕಾತಿಯ ಮೂಲಕ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ಚಟುವಟಿಕೆಗಳಲ್ಲಿ ಮೃಣಾಲ್ ಹೆಬ್ಬಾಳಕರ್ ಅವರ ಪಾತ್ರ ಮತ್ತಷ್ಟು ವಿಸ್ತರಿಸಿದಂತಾಗಿದೆ.

Goa Assembly Elections: Mrinal Hebbalkar Appointed AICC Coordinator

Congress High Command entrusts key responsibility to Belagavi’s young leader

In the run-up to the upcoming Goa Assembly elections, the All India Congress Committee (AICC) has appointed four coordinators, with Mrinal Hebbalkar, a young Congress leader from Belagavi, being entrusted with an important responsibility.

AICC Media and Publicity Department Chairman Pawan Khera issued an official announcement regarding the appointments on September 14.

The coordinators have been appointed to oversee and effectively coordinate media-related activities in connection with the Goa Assembly elections. According to the official announcement, all the appointed coordinators will work in close coordination with the Goa Pradesh Congress Committee and handle media and publicity-related activities.

Appointed Coordinators

Matthew Antony – National Media Coordinator

Mrinal Hebbalkar – Coordinator

Nishanth Anand – Coordinator

Ali Mehdi – Coordinator

Mrinal Hebbalkar, who has been actively involved in various party responsibilities, has now been entrusted with an AICC-level responsibility in connection with the upcoming Goa Assembly elections.

The appointment marks a significant expansion of his role in the Congress party’s media and publicity-related activities and reflects the responsibility entrusted to the young Belagavi leader by the party leadership.

गोवा विधानसभा निवडणूक: AICC समन्वयक म्हणून मृणाल हेब्बाळकर यांची नियुक्ती

बेळगावच्या युवा नेत्यावर काँग्रेस हायकमांडकडून महत्त्वाची जबाबदारी

आगामी गोवा विधानसभा निवडणुकीच्या पार्श्वभूमीवर अखिल भारतीय काँग्रेस कमिटीने (AICC) चार समन्वयकांची नियुक्ती केली असून, बेळगावचे युवा काँग्रेस नेते मृणाल हेब्बाळकर यांच्यावर महत्त्वाची जबाबदारी सोपविण्यात आली आहे.

AICC च्या माध्यम आणि प्रचार विभागाचे अध्यक्ष पवन खेरा यांनी १४ सप्टेंबर रोजी यासंदर्भातील अधिकृत घोषणा केली.

गोवा विधानसभा निवडणुकीच्या पार्श्वभूमीवर माध्यमांशी संबंधित उपक्रम अधिक प्रभावीपणे राबविण्याच्या उद्देशाने या नियुक्त्या करण्यात आल्या आहेत. नियुक्त करण्यात आलेले सर्व समन्वयक गोवा प्रदेश काँग्रेस कमिटीसोबत घनिष्ठ समन्वय साधून माध्यम आणि प्रचाराशी संबंधित उपक्रमांची जबाबदारी पार पाडणार आहेत, असे या अधिकृत निवेदनात नमूद करण्यात आले आहे.

नियुक्त करण्यात आलेले समन्वयक:

मॅथ्यू अँथनी – राष्ट्रीय माध्यम समन्वयक

मृणाल हेब्बाळकर – समन्वयक

निशांत आनंद – समन्वयक

अली मेहदी – समन्वयक

बेळगाव येथील युवा नेते मृणाल हेब्बाळकर हे पक्षाच्या विविध जबाबदाऱ्यांमध्ये सक्रियपणे कार्यरत असून, आगामी गोवा विधानसभा निवडणुकीच्या पार्श्वभूमीवर त्यांच्यावर AICCकडून महत्त्वाची जबाबदारी सोपविण्यात आली आहे.

या नियुक्तीमुळे काँग्रेसच्या माध्यम आणि प्रचारविषयक उपक्रमांमध्ये मृणाल हेब्बाळकर यांची भूमिका आणखी व्यापक झाली आहे.

Related Articles

Back to top button