Belagavi NewsBelgaum NewsKannada NewsKarnataka NewsNationalPolitics

*ಪಂಜಿನ ಮೆರವಣಿಗೆ: ಲಕ್ಷ್ಮೀ ಹೆಬ್ಬಾಳಕರ್ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಬುಧವಾರ ಸಂಜೆ ಬೆಂಬಲಿಗರು ಪಂಜಿನ ಮೆರವಣಿಗೆ ನಡೆಸಿದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿ, ಲಕ್ಷ್ಮೀ ಹೆಬ್ಬಾಳಕರ್ ಪರ ಘೋಷಣೆಗಳನ್ನು ಕೂಗಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಕೆಲಕಾಲ ಗಮನ ಸೆಳೆಯಿತು.

Home add -Advt

ಬಳಿಕ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಾಹನ ಸಂಚಾರದಲ್ಲಿ ಅಲ್ಪಕಾಲ ವ್ಯತ್ಯಯ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ರಸ್ತೆ ತಡೆ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಡಿವೇಶ ಇಟಗಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನೆಗೆ ಹಾಗೂ ಜನಸೇವೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಅನುಭವ, ಆಡಳಿತ ಸಾಮರ್ಥ್ಯ ಮತ್ತು ಜನಪರ ಕಾರ್ಯಗಳನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಅವರಿಗೆ ಸೂಕ್ತ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು, ಪಕ್ಷದ ಹಿರಿಯ ನಾಯಕತ್ವವು ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ಸ್ಪಂದಿಸಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಹಿರೇಬಾಗೇವಾಡಿ ಬಸವೇಶ್ವರ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಸಾಗಿತು.

ಪ್ರತಿಭಟನೆಯಲ್ಲಿ  ಸಿದ್ದಪ್ಪ ಸಿಂಗಾಡಿ,ರಘು ಪಾಟೀಲ,ಮನ್ಸುರ್ ಅಲಿ ಅತ್ತಾರ,ಅನಿಲ್ ಕರಲಿಂಗಣ್ಣವರ,ಸಿದ್ದಪ್ಪಾ ಚಾಪಗಾಂವಿ,ಅಡಿವೆಪ್ಪಾ ತೋಟಗಿ,ರವಿ ಗಾಣಗಿ,ಮುಶ್ಯಾಪ ಉಪ್ಪಾರ, ರಾಜು ಉಪ್ಪಾರ,ನೀಲಕಂಠ, ಆಂಜನೇಯ  ಗೌಸ್ ಜಾಲಿಕೊಪ್ಪ, ರವಿ ಗಣಿಗಾ, ರಮೇಶ್ ವಾಲಿ, ರಶೀದ್ ಸಾಹೇದ್, ಬಸವರಾಜ್ ಇಟಗಿ, ಆನಂದ್ ಪಾಟೀಲ್, ಸುರೇಶ್ ಗೊಂಡ್ಲೂರು, ಚನ್ನಪ್ಪ ಹುದಲಿ, ನೀಲಕಂಠ ಪರವತಿ, ಬಸವರಾಜ್ ಯಾದವಾಡ, ಮಹೇಶ್ ಗುಂಡ್ಲೂರು ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Back to top button