ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಯೋಜನೆ ಅರ್ಜಿ ನಮೂನೆ ಅಸಲಿಯಾಗಿದ್ದು, ಅರ್ಜಿಯಲ್ಲಿರುವ ಒಂದೆರಡು ಅಂಶಗಳನ್ನು ಮತ್ತು ಡಿಸೈನ್ ನ್ನು ಸ್ವಲ್ಪ ಬದಲಿಸಲಾಗುವುದು ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಅರ್ಜಿ ನಮೂನೆ ಅಸಲಿ ನಮೂನೆಯಾಗಿದೆ, ಅದು ನಕಲಿ ಅಲ್ಲ. ಅರ್ಜಿಯಲ್ಲಿರುವ ಒಂದೆರಡು ಅಂಶಗಳನ್ನು ಬದಲಿಸಲಾಗುವುದು, ಜಾತಿ ಕಾಲಂ ತೆಗೆದು ವರ್ಗ ಎಂದು ಹಾಕಲಾಗುವುದು, ಅರ್ಜಿಯ ಡಿಸೈನ್ ಸ್ವಲ್ಪ ಬದಲಾಗಲಿದೆ ಎಂದು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಗೆ ಮಗ ತೆರಿಗೆ ಕಟ್ಟುವುದು ಅನ್ವಯ ಆಗಲ್ಲ. ಫಲಾನುಭವಿಯ ಗಂಡ ತೆರಿಗೆ ಕಟ್ಟಿದರೆ ಪತ್ನಿಗೆ ಗೃಹಲಕ್ಷ್ಮೀ ಯೋಜನೆ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
90% ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಪ್ರಮುಖರಾಗಿದ್ದಾರೆ, ಯಜಮಾನಿ ಎಂದೇ ನಮೂದಾಗಿದೆ. ವೃದ್ದಾಶ್ರಮದಲ್ಲಿರುವ ಮಹಿಳೆಯರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ದರೆ ಅವರಿಗೂ ಯೋಜನೆ ಸಿಗಲಿದೆ ಎಂದು ಹೆಬ್ಬಾಳಕರ್ ಹೇಳಿದರು.
ಮತ್ತೇನಾದರೂ ಮಾರ್ಪಾಡುಗಳು ಅಗತ್ಯವೆನಿಸಿದರೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸಾಧ್ಯವಾದಷ್ಟು ಹೆಚ್ಚು ಜನರಿಗೆ ಯೋಜನೆಯ ಪ್ರಯೋಜನ ಸಿಗಬೇಕೆನ್ನುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
https://pragati.taskdun.com/lokayuktaraidkushalanagara-aeearrest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ