Kannada NewsKarnataka NewsLatest

ದೇಶದ ಆರ್ಥಿಕ ಅಭಿವೃದ್ಧಿಗೆ ಜಿಎಸ್ ಟಿ ಸರಳ ನಿಯಮ: ಮೇಜರ್ ಜನರಲ್  ಪರಮದೀಪ್ ಸಿಂಗ್ ಬಾಜ್ವಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ ಜಿಡಿಪಿ ಮೌಲ್ಯ ಹೆಚ್ಚಿಸಲು ಹಾಗೂ ಆರ್ಥಿಕ ಅಭಿವೃದ್ಧಿ ಹೊಂದಲು ಜಿಎಸ್ ಟಿ ಪಾತ್ರ ಬಹಳ ದೊಡ್ಡದು. ದೇಶದಲ್ಲಿ ತೆರಿಗೆ ಪಾವತಿಸುವ ಅತೀ ಸರಳ ವಿಧಾನವಾಗಿದೆ. ದೇಶದಲ್ಲಿ ಜಿಎಸ್ ಟಿ ವ್ಯಾಪ್ತಿಯಲ್ಲಿ ಬರುವ ಬೃಹತ್ ಹಾಗೂ ಮಧ್ಯಮ ಉದ್ದಿಮೆಗಳು ತೆರಿಗೆ ಪಾವತಿಸಿ ದೇಶದ ಬೆಳವಣಿಗೆಯ ಕೈಜೋಡಿಸಬೇಕು ಎಂದು ಮೇಜರ್ ಜನರಲ್ ಪರಮದೀಪ್ ಸಿಂಗ್ ಬಾಜ್ವಾ ತಿಳಿಸಿದರು.

ನಗರದ  ಕೆಎಲ್ಇ ಶತಾಬ್ದಿ ಸಭಾಂಗಣದಲ್ಲಿ ಶುಕ್ರವಾರ ನಡೆದ  5ನೇ ವರ್ಷದ ಜಿಎಸ್ ಟಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗಾವಿಯ ಸಿಜಿಎಸ್ಟಿ ಕಳೆದ ವರ್ಷ 7.129 ಕೋಟಿ ರೂ. ಸಂಗ್ರಹವಾಗಿತ್ತು.    2021-22 ನೇ ಸಾಲಿನ  10.171  ಕೋಟಿ ರೂಪಾಯಿ ಹೆಚ್ಚಿನ ಜಿಎಸ್ ಟಿ ಸಂಗ್ರಹವಾಗಿದೆ. ಇದರ ಹಿಂದೆ ಅಧಿಕಾರಿಗಳ ಪರಿಶ್ರಮ ಬಹಳಷ್ಟಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಜಿಎಸ್‌ಟಿ ತೆರಿಗೆ ವಿಧಾನ ಅತಿ ಸರಳವಾಗಿದೆ ಎಂದು ತಿಳಿಸಿದರು.

ಹೊಸ ತೆರಿಗೆ ಪದ್ಧತಿ ಅಳವಡಿಕೆ ಬಹಳ ಕಷ್ಟಕರವಾಗಿತ್ತು. 2017 ರಲ್ಲಿ ಪ್ರಾರಂಭವಾದ ಜಿಎಸ್‌ಟಿ ವಿಧಾನ ಸತತ 5 ವರ್ಷಗಳಿಂದ ಸ್ಥಿರತೆ ಕಾಯ್ದುಕೊಂಡಿದೆ, ಪ್ರತಿ ವರ್ಷ ಜಿಎಸ್ ಟಿ ಹೆಚ್ಚು ಸಂಗ್ರಹವಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವದಲ್ಲಿ ದೇಶದ ಆರ್ತೆಥಿಕತೆ ಬಲಪಡಿಸಲು ಜಿಎಸ್‌ಟಿ  ಬಹಳ ಮುಖ್ಯವಾಗಿದೆ. ಜಪಾನ್, ಅಮೆರಿಕದಂತಹ ದೇಶಗಳಿಗೆ ಹೋಲಿಸಿದರೆ ಭಾರತ ದೇಶ ಕೂಡ ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ ಎಂದು ಮೇಜರ್ ಜನರಲ್ ಪರಮದೀಪ್ ಸಿಂಗ್ ಬಾಜ್ವಾ ತಿಳಿಸಿದರು.

ಈ ವೇಳೆ ಮಾತಾಡಿದ ಜೆಎಸ್ ಡಬ್ಲ್ಯೂ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಗ್ರೂಪ್ ಮುಖ್ಯಸ್ಥ ವಿನೀತ  ಅರ‍್ವಾಲ್ ಅವರು, ಯಾವುದೇ ಯಶಸ್ಸಿಗೆ ಕಠಿಣ ಪರಿಶ್ರಮ ಬಹಳ ಮುಖ್ಯವಾಗಿರುತ್ತದೆ. ಅದೇ ರೀತಿ ಜಿಎಸ್ ಟಿ 2017 ರಲ್ಲಿ ಜಾರಿಯಾಗಿದ್ದು, ಜಿಎಸ್ ಟಿ ಸಂಗ್ರಹಣೆಯು ಪ್ರತಿ ವರ್ಷಕ್ಕೆ ಏರಿಕೆಯಲ್ಲಿದೆ. ಮುಂಬರುವ ದಿನಗಳಲ್ಲಿ ದೇಶದಲ್ಲಿನ ವ್ಯಾಪಾರ ಉದ್ಯಮಗಳ ಬೆಳವಣಿಗೆಯಿಂದ ಪ್ರತಿ ವರ್ಷದಂತೆ ಜಿಎಸ್ ಟಿ ಏರಿಕೆ ಪ್ರಮಾಣದಲ್ಲಿ ಸಂಗ್ರಹವಾಗಲಿದೆ ಎಂದು ತಿಳಿಸಿದರು.

ಜಿಎಸ್ ಟಿ ಇದು ವಿವಿಧ ಮಾದರಿಯ ತೆರಿಗೆ ಪಾವತಿಸುವುದು ವಿಧಾನವಲ್ಲ. ಬೃಹತ್ ಮತ್ತು ಮಾಧ್ಯಮ ಪ್ರಮಾಣದ ಉದ್ಯಮಿಗಳಿಗೆ ತೆರಿಗೆ ಪಾವತಿಸುವ ಸರಳ ಮಾದರಿಯ ವಿಧಾನವಾಗಿದೆ ಎಂದು ತಿಳಿಸಿದರು.

ಉದ್ಯಮಿಗಳು ತಮ್ಮ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡಿ ಬರುವ ಲಾಭದಲ್ಲಿ ಪ್ರಾಮಾಣಿಕತೆಯಿಂದ ತೆರಿಗೆ ಪಾವತಿಸುವುದು ಅವರ ಕರ್ತವ್ಯವಾಗಿದೆ. ಇದರಿಂದ ದೇಶದ ರ‍್ಥಿಕ ಬೆಳವಣಿಗೆಗೆ ಉದ್ಯಮಿಗಳು ನೀಡುವ ಕೊಡುಗೆಯಾಗಿದೆ ಎಂದು ಅರ‍್ವಾಲ್ ಅವರು ತಿಳಿಸಿದರು.

ಕೇಂದ್ರ ತೆರಿಗೆ ಆಯುಕ್ತ ಬಸವರಾಜ ನಳೆಗಾವೆ, ಕೆಎಲ್ ಇ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎ. ಸಾವಜಿ, ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಕಂಪನಿಯ ಮಾಲೀಕರುಗಳು, ಉದ್ಯಮಿಗಳು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಳಗಾವಿ ವರ್ತಕರಿಗೆ 75 ಲಕ್ಷ ರೂ. ಪಂಗನಾಮ ಹಾಕಿ ವಿದೇಶಕ್ಕೆ ಹಾರಿದ್ದ ವ್ಯಕ್ತಿ ಮುಂಬೈಯಲ್ಲಿ ಬೆಳಗಾವಿ ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button