Kannada NewsLatestNationalPolitics

*GST ಸಂಬಂಧಿತ 3900ಕ್ಕೂ ಅಧಿಕ ಸಂಶಯಗಳ ನಿವಾರಣೆ*

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ʼNext Gen Gstʼ ಸಂಬಂಧಿತ ಪ್ರಶ್ನೆ ಮತ್ತು ದೂರುಗಳನ್ನು ಪರಿಹರಿಸಲೆಂದು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ತೆರೆದಿದ್ದು, ಈಗಾಗಲೇ 3900ಕ್ಕೂ ಹೆಚ್ಚು ಸಂಶಯಗಳನ್ನು ನಿವಾರಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ತೆರೆದಿದ್ದಲ್ಲದೆ, UMANG aap, ವಾಟ್ಸಪ್‌ ಮತ್ತು ಎಸ್ಸೆಮ್ಮೆಸ್‌ಗಳ ಮೂಲಕ ಪ್ರಶ್ನೆ ಮತ್ತು ದೂರುಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. 17 ಭಾಷೆಗಳಲ್ಲಿ ಸಾರ್ವಜನಿಕರು ದೂರು-ಸಂಶಯಗಳನ್ನು CCPA ಗಮನಕ್ಕೆ ತರಬಹುದಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಈಗಾಗಲೇ Gst ಸಂಬಂಧಿತ ಕುಂದು-ಕೊರತೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಪ್ರತಿಯೊಬ್ಬ ಗ್ರಾಹಕರ ಹಿತರಕ್ಷಣೆ ಕಾಪಾಡುವಲ್ಲಿ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವ್ಯವಹಾರ-ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತಿದೆ ಎಂದಿದ್ದಾರೆ.

Home add -Advt

3981 ಸಂಶಯಗಳ ನಿವಾರಣೆ: ʼnext gen gstʼ ಬಗ್ಗೆ ಗ್ರಾಹಕರಿಗಿರುವ ತಪ್ಪು ಮಾಹಿತಿಯನ್ನು ದೂರ ಮಾಡುವ ಜತೆಗೆ Gst ಸುಧಾರಣೆಗಳ ಪ್ರಯೋಜನವನ್ನು ಪ್ರತಿಯೊಬ್ಬ ಭಾರತೀಯರಿಗೆ ತಲುಪಿಸುವಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಮಹತ್ವದ ಹೆಜ್ಜೆಯಿರಿಸಿದೆ. ಈಗಾಗಲೇ 3981 ಸಂಶಯಗಳನ್ನು ಸ್ವೀಕರಿಸಿ ನಿವಾರಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

Related Articles

Back to top button