
ಇಲ್ಲಿದೆ ಮಾಹಿತಿ
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಜಿಎಸ್ ಐತಿ ದರ ಪರಿಷ್ಕರಣೆ ಮಾಡಿದ್ದು, ಮಹತ್ವದ ಘೋಷಣೆ ಮಾಡಿದೆ. ಹಲವು ವಸ್ತುಗಳ ಮೇಲೆ ಜುಎಸ್ ಟಿ ತೆರಿಗೆ ಕಡಿತಗೊಳಿಸಿದೆ.
ಶೇ.12ಮತ್ತು 28ರ ಸ್ಲ್ಯಾಬ್ ಗಳನ್ನು ರದ್ದುಗೊಳಿಸಿ, ಶೇ.5 ಮತ್ತು 18ರ ಸ್ಲ್ಯಾಬ್ ಗಳನ್ನು ಉಳಿಸಿಕೊಳ್ಳಲಾಗಿದೆ. ಐಷಾರಾಮಿ ವಸ್ತುಗಳ ಮೇಲಿನ ತೆರಿಗೆ ದರವನ್ನು ಶೇ. 40ಕ್ಕೆ ಏರಿಸಲಾಗಿದ್ದರೂ ಹಲವು ಆಹಾರ ಪದಾರ್ಥಗಳು, ಶೈಕ್ಷಣಿಕ ಸಾಮಗ್ರಿ, ಇನ್ಸೂರೆನ್ಸ್ ಮೇಲಿನ ಜಿಎಸ್ ಟಿ ಕಡಿತಗೊಳಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಭರ್ಜರಿ ಕೊಡುಗೆ ನೀಡಿದೆ.
ಯಾವೆಲ್ಲ ವಸ್ತುಗಳ ತೆರಿಗೆ ಕಡಿತ?
ಯುಹೆಚ್ ಟಿ ಮಿಲ್ಕ್, ಪ್ಯಾಕ್ ಮಾಡಿದ ಚೆನ್ನಾ, ಪನ್ನೀರ್, ಇಂಡಿಯನ್ ಬ್ರೆಡ್ಸ್, ರೋಟಿ, ಕಾಕ್ರಾ, ಚಪಾತಿ, ಪರೋಟ, ಪಿಜ್ಜಾ ಹಾಗೂ ಬ್ರೆಡ್ , ಏರ್ ಆಯಿಲ್, ಟೂತ್ ಬ್ರೆಶ್, ಸೋಪ್, ಶಾಂಪೂ, ಕೃಷೀ ಉಪಕರಣಗಳು, ಟ್ರ್ಯಾಕ್ಟರ್ ಇವುಗಳು ಈವರೆಗೆ ಶೇ.5ರ ಜಿಎಸ್ ಟಿ ಸ್ಲ್ಯಾಬ್ ಅಡಿ ಬರುತ್ತಿದ್ದವು. ಈ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಮಕ್ಕಳ ಕಲಿಕಾ ಸಾಮಗ್ರಿಗಳಾದ ಮ್ಯಾಪ್ಸ್, ಚಾರ್ಟ್ಸ್, ಗ್ಲೋಬ್ಸ್, ಪೆನ್ಸಿಲ್, ಶಾರ್ಪನರ್, ಎರೇಸರ್, ಕ್ರಯನ್ಸ್, ಪ್ಯಾಸ್ಟೆಲ್ ಗಳು, ಎಕ್ಸ್ರ್ ಸೈಜ್ ಬುಕ್ಸ್, ನೋಟ್ ಬುಕ್ ಗಳ ಮೇಲೆ ಈವರೆಗೆ ಶೇ.12ರಷ್ಟು ಜಿಎಸ್ ಟಿ ಇತ್ತು. ಇವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ವೈಯಕ್ತಿಕ ಹಾಗೂ ಆರೋಗ್ಯ ವಿಮೆ ತೆರಿಗೆ ಇಲ್ಲ:
ವೈಯಕ್ತಿಕ ವಿಮೆ ಮತ್ತು ಆರೋಗ್ಯ ವಿಮೆ ಮೇಲಿನ ಶೇ.18ರ ಜಿಎಸ್ ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ವೈಯಕ್ತಿಕ ಜೀವವಿಮೆ ಮತ್ತು ಆರೋಗ್ಯವಿಮೆಗೆ ಕೇಂದ್ರ ಸರ್ಕಾರ ಬಿಗ್ ರಿಯಾಯಿತಿ ನಿಡಿದೆ.
ಐಷಾರಾಮಿ ವಸ್ತುಗಳ ಬೆಲೆ ಏರಿಕೆ:
ಶೇ.28ರಷ್ಟು ಜಿಎಸ್ ಟಿ ವ್ಯಾಪ್ತಿಗೆ ಬರುತ್ತಿದ್ದ್ ಐಷಾರಾಮಿ ವಸ್ತುಗಳ ಮೇಲಿನ ಜಿಎಸ್ ಟಿ ಇನ್ಮುಂದೆ ಶೇ.48ರಷ್ಟು ಪಾವತಿಸಬೇಕು.
ಸಿಗರೇಟ್, ಸಿಗಾರ್, ಪಾನ್ ಮಸಾಲ, ಜರ್ದಾ, ಬೀಡಿ, ತಂಬಾಕು, ಜಗಿಯುವ ವಸ್ತುಗಳು, ಅಧಿಕ ಸಕ್ಕರೆ ಅಂಶ ಇರುವ ಪಾನೀಯಗಳು, ಸೋಡಾ, ಕೂಲ್ ಡ್ರಿಂಕ್ಸ್, ಹಣ್ಣಿನ ಕಾರ್ಬೊನೇಟೆಡ್ ಪಾನಿಯಗಳು, ಕೆಫಿನ್ ಇರುವ ಪಾನೀಯಗಳಿಗೆ ತೆರಿಗೆ ಹೆಚ್ಚಲಿದೆ.
ಫ್ಲೈಟ್, ಹೆಲಿಕಾಪ್ಟರ್, ಐಷಾರಾಮಿ ಕಾರುಗಳು, 350 ಸಿಸಿಗಿಂತ ಹೆಚ್ಚಿನ ಬೈಕ್ ಗಳು, ಮನರಂಜನಾ ದೋಣಿ, ಹಡಗುಗಳು, ರಿವಾಲ್ವರ್ ಗಳು ಭಾರಿ ದುಬಾರಿಯಾಗಲಿವೆ.