ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಹಾಲು, ಮೊಸರು, ಅಕ್ಕಿ ಸೇರಿದಂತೆ ಪ್ಯಾಕ್ ಹಾಗೂ ಲೇಬಲ್ ಮಾಡಿದ ವಸ್ತುಗಳ ಮೇಲೆ ಶೇ.5ರಷ್ಟು ಜಿಎಸ್ ಟಿ (ಸರಕು ಮತ್ತು ಸೇವಾ ಸುಂಕ) ವಿಧಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಗ್ರಾಹಕರು ಹಾಗೂ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ 12 ವಸ್ತುಗಳಿಗೆ ಜಿಎಸ್ ಟಿ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದಿನ ಬಳಕೆಯ 12 ವಸ್ತುಗಳ ಮೇಲೆ ಜಿಎಸ್ ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪಟ್ಟಿ ನೀಡಿದ್ದಾರೆ. ಈ ವಸ್ತುಗಳು ಪ್ಯಾಕ್ ಮಾಡದಿದ್ದರೆ, ಯಾವುದೇ ಲೇಬಲ್ ಮಾಡದಿದ್ದರೆ ಮಾತ್ರ ಅವುಗಳಿಗೆ ಜಿಎಸ್ ಟಿ ಅನ್ವಯವಾಗುವುದಿಲ್ಲ. ಇದು ಜಿಎಸ್ ಟಿ ಕೌನ್ಸಿಲ್ ನಿರ್ಧಾರ ಹೊರತು ಒಬ್ಬ ಸದಸ್ಯನ ನಿರ್ಧಾರವಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ಪ್ಯಾಕ್ ಮಾಡದೇ ಮಾರಾಟ ಮಾಡುವ ಜಿಎಸ್ ಟಿಯಿಂದ ವಿನಾಯಿತಿ ಇರುವ ವಸ್ತುಗಳು:
ಅಕ್ಕಿ
ದ್ವಿದಳ ಧಾನ್ಯ-ಬೇಳೆ
ಗೋಧಿ
ಸಣ್ಣ ಗೋಧಿ
ಓಟ್ಸ್
ಮೈದಾ
ಗೋಧಿ ಹಿಟ್ಟು
ಸೂಜಿ ರವಾ
ಕಡಲೆಬ್ ಹಿಟ್ಟು
ಮಂಡಕ್ಕಿ
ಮೊಸರು, ಲಸ್ಸಿ
ಈ ವಸ್ತುಗಳನ್ನು ಬಿಡಿಯಾಗಿ ಮಾರಾಟ ಮಾಡಿದರೆ, ಯಾವುದೇ ಪ್ಯಾಕಿಂಗ್, ಲೇಬಲ್ ಇಲ್ಲದಿದ್ದರೆ ಅವುಗಳಿಗೆ ಜಿಎಸ್ ಟಿ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ