Latest

ಮಾಲ್ ನಲ್ಲಿ ಹನುಮಾನ ಚಾಲೀಸಾ ಪಠಣ; ಇಬ್ಬರು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಮಾಲ್ ನಲ್ಲಿ ಹನುಮಾನ ಚಾಲೀಸಾ ಪಠಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗಷ್ಟೇ ತೆರೆಯಲಾದ ಭಾರತದ ಅತ್ಯಂತ ದೊಡ್ಡ ಮಾಲ್ ಎನಿಸಿರುವ ಲುಲುಸ್ ಮಾಲ್ ನಲ್ಲಿ ಇಬ್ಬರು ನುಗ್ಗಿ ಹನುಮಾನ್ ಚಾಲೀಸಾ ಪಠಿಸತೊಡಗಿದರು. ಮಾಲ್ ಒಳಗೆ ಹನುಮಾನ್ ಚಾಲೀಸಾ ಪಠಣಕ್ಕಾಗಿಯೇ ಬಲವಂತದಿಂದ ಪ್ರವೇಶಿಸಲು ಯತ್ನಿಸಿದ 15ಕ್ಕೂ ಹೆಚ್ಚು ಜನರನ್ನು ಸಹ ವಶಕ್ಕೆ ಪಡೆದಿದ್ದಾಗಿ  ದಕ್ಷಿಣ ಲಕ್ನೋ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ತಿಳಿಸಿದ್ದಾರೆ.

Home add -Advt

ಇತ್ತೀಚೆಗೆ ಲುಲುಸ್ ಮಾಲ್ ನಲ್ಲಿ ಕೆಲವರು ನಮಾಜ್ ಮಾಡುವ ಮೂಲಕ ಸುದ್ದಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಈ ಹನುಮಾನ್ ಚಾಲೀಸಾ ಪಠಣ ನಡೆದಿತ್ತು ಎನ್ನಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಗೋಲ್ ಮಾಲ್; ಎಂ.ಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು

Related Articles

Back to top button