
ಪ್ರಗತಿವಾಹಿನಿ ಸುದ್ದಿ: ರೋಪ್ ವೇ ಟ್ರಾಲಿ ಏಕಾಏಕಿ ಮುರಿದು ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಪಂಚಮಹಲ್ ಜಿಲ್ಲೆಯ ಪಾವಗಡ ಬೆಟ್ಟದ ಶಕ್ತಿಪೀಠದ ಬಳಿ ನಡೆದಿದೆ.
ಪಂಚಮಹಲ್ ಜಿಲೆಯ ಪಾವಗಡ ಬೆಟ್ಟದ ಶಕ್ತಿ ಪೀಠ ದೇವಸ್ಥಾನದ ಬಳಿ ಈ ಘಟನೆ ಸಂಭವಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ವಸ್ತುಗಳನ್ನು, ಸಲಕರಣೆಗಳನ್ನು ರೋಪ್ ವೇ ಟ್ರಾಲಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ರೋಪ್ ವೇ ಕುಸಿದ ಪರಿಣಾಮ ಟ್ರಾಲಿ ಮುರಿದು ಬಿದ್ದಿದೆ. ಸ್ಥಳದಲ್ಲೇ 6 ಜನರು ಸಾವನ್ನಪ್ಪಿದ್ದಾರೆ.
ಇಬ್ಬರು ಲಿಫ್ಟ್ ಆಪರೇಟರ್ ಗಳು, ಇಬ್ಬರು ಕಾರ್ಮಿಕರು ಸೇರೊ ಒಟ್ಟು 6 ಜನರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಪಾವಗಡ ಬೆಟ್ಟದ ಮೇಲೆ ಶಕ್ತಿಪೀಠವೆಂದೇ ಪ್ರಸಿದ್ಧಿ ಪಡೆದಿರುವ ಕಾಳಿ ದೇವಾಲಯವಿದ್ದು, ಇಲ್ಲಿಗೆ ಯಾತ್ರಿಕರು ಹೋಗಬೇಕಾದರೆ 2000 ಮೆಟ್ಟಿಲು ಹತ್ತಿ ಹೋಗಿ ದೇವರ ದರ್ಶನ ಪಡೆಯಬೇಕು. ಇಲ್ಲವೇ ಕೇಬಲ್ ಕಾರುಗಳ ಮೂಲಕವಾಗಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಬೇಕು.