Kannada NewsKarnataka NewsLatest

ಹಿಂಡಲಗಾ ಗಣಪತಿ ಮಂದಿರ ಬಳಿ ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ; ತಾಯಿ, ಓರ್ವ ಮಗ ಸಾವು, ಇನ್ನೋರ್ವನಿಗಾಗಿ ಹುಡುಕಾಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಹಿಂಡಲಗಾ ಗಣಪತಿ ಮಂದಿರದ ಬಳಿ ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಓರ್ವ ಮಗ ಸಾವಿಗೀಡಾಗಿದ್ದು, ಇನ್ನೋರ್ವ ಮಗನಿಗಾಗಿ ಹುಟುಕಾಟ ನಡೆಸಲಾಗುತ್ತಿದೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಸಹ್ಯಾದ್ರಿ ನಗರದ 36 ವರ್ಷದ ಕೃಷಾ ಆತ್ಮಹತ್ಯೆ ಮಾಡಿಕೊಂಡವಳು. 4 ವರ್ಷದ ಮಗ ಭಾವಿರಾ ಶವ ಸಹ ಸಿಕ್ಕಿದೆ. ಇನ್ನೋರ್ವ ಮಗ ವಿರೇನ್ (7) ಗಾಗಿ ಹುಟುಕಾಟ  ನಡೆದಿದೆ.

ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,. ಪೊಲೀಸರು ಇನ್ನೋರ್ವ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ.

ಹಿರೋಯಿನ್ ಮಾಡುತ್ತೇನೆಂದು ಯುವತಿ ಬೆನ್ನುಬಿದ್ದಿದ್ದ ಯುವಕ ಅರೆಸ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button