VTU Add
Beereshwara 36
LaxmiTai 5

*ಉತ್ತರ ಕರ್ನಾಟಕದ ಲೇಖಕರನ್ನು ಗುರುತಿಸುತ್ತಿಲ್ಲ; ಡಾ ಬಸವರಾಜ ಜಗಜಂಪಿ ಅಸಮಾಧಾನ*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿನ್ನೊಳಗೊಂಡು ಉತ್ತರ ಕರ್ನಾಟಕದಲ್ಲಿ ಪ್ರತಿಭಾವಂತ ಬರಹಗಾರರಿದ್ದಾರೆ. ಅಭ್ಯಾಸಪೂರ್ಣ ಕೃತಿಗಳನ್ನು ರಚಿಸುತ್ತಿದ್ದಾರೆ ಯಾವುದೇ ಪಿ ಎಚ್ ಡಿ ಪ್ರಬಂಧಗಳಿಗೆ ಕಡಿಮೆ ಇಲ್ಲದ ಕೃತಿಗಳು ಹೊರಬರುತ್ತಿವೆ ಅಂತಹ ಬರಹಗಾರರಲ್ಲಿ ಶಿರೀಷ ಜೋಶಿ ಕೂಡ ಒಬ್ಬರು ಅವರ ಈ ‘ಗುಜರಿ ತೋಡಿ’ ಕಾದಂಬರಿ ಕೂಡ ಸಾಕಷ್ಟು ಮಹತ್ವದ ವಿವರಗಳನ್ನು ಒಳಗೊಂಡ ಕೃತಿಯಾಗಿದ್ದು ಲೇಖಕ ವಿಶ್ವವಿದ್ಯಾಲಯದ ಅಕಾಡೆಮಿಯ ಗೌರವಕ್ಕೆ ಅರ್ಹರಾಗಿದ್ದಾರೆ. ಆದರೆ ಉತ್ತರ ಕರ್ನಾಟಕದ ಇಂತಹ ಕೆಲಸಗಳನ್ನು ಗುರುತಿಸಿ ಗೌರವಿಸದಿರುವುದು ಬೇಸರದ ವಿಷಯ ಎಂದು ನಾಡಿನ ಖ್ಯಾತ ವಿದ್ವಾಂಸ ಡಾ. ಬಸವರಾಜ ಜಗಜಂಪಿ ನುಡಿದರು.

ಅವರು ಇಂದು ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ‌ ಶಿರೀಷ ಜೋಶಿ ರಚಿಸಿದ ಗುಜರಿ ತೋಡಿ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡುತಿದ್ದರು.

ಕರ್ನಾಟಕದಲ್ಲಿ ಸಾಕಷ್ಟು ‌ಅಕಾಡೆಮಿಗಳಿವೆ ವಿಶ್ವವಿದ್ಯಾಲಯಗಳಿವೆ ಉತ್ತಮ ಗುಣಮಟ್ಟದ ಮೌಲಿಕ ಬರಹಗಾರರಿದ್ದಾರೆ. ಸಂಶೋಧನಾತ್ಮಕ ಕೃತಿಗಳನ್ನು ರಚಿಸುತಿದ್ದಾರೆ ಆದರೆ ಅಂಥವರನ್ನು ಗುರುತಿಸುವ ಕೆಲಾವಾಗುತ್ತಿಲ್ಲ. ಸಂಭಂದಿಸಿದವರು ಇತ್ತ ಗಮನಿಸಬೇಕಾದ ಅಗತ್ಯವಿದೆ ಎಂದು ಡಾ ಬಸವರಾಜ ಜಗಜಂಪಿ ಅಭಿಪ್ರಾಯ ಪಟ್ಟರು.

Cancer Hospital 2


ಬೆಳಗಾವಿಯ ಅನಗೋಳ ಆಶೀರ್ವಾದ ಮಂಗಲ ಕಾರ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಕೃತಿಯ ಕುರಿತು ಡಾ ಪಿ ಜಿ ಕೆಂಪಣ್ಣವರ ಮತ್ತು ಪ್ರೊ ಜಿ ಆರ್ ಕುಲಕರ್ಣಿ ಮಾತನಾಡಿ ಲೇಖಕ ಅತ್ಯಂತ ತಾಳ್ಮೆಯಿಂದ ಮತ್ತು ಶ್ರಮದಿಂದ ಈ ಕೃತಿ ರಚಿಸಿದ್ದು ಇದೊಂದು ಮೌಲಿಕ ಗ್ರಂಥವಾಗಿದೆ ಎಂದರು

Emergency Service

ಸಾನಿಧ್ಯ ವಹಿಸಿದ್ದ ಚಿಂಚಣಿಯ ಪೂಜ್ಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಜಿಯವರು ಶಿರೀಷ ಜೋಷಿಯವರ ಪ್ರತಿಯೊಂದು ಕೃತಿಯೂ ಅಭ್ಯಾಸಪೂರ್ಣವಾಗಿರುತ್ತದೆ ಉದ್ದೇಶಕ್ಕೆ ಭಂಗವಾಗದಂತೆ ಅವರ ಬರವಣಿಗೆ ಇರುತ್ತದೆ. ಕೃತಿಗಳ ರಚನೆ ಅಷ್ಟೇ ಅಲ್ಲ ಅವರು ಚಲನಚಿತ್ರ ಕಥಾ ಸಂಭಾಷಣೆಗಳನ್ನು ಕೂಡ ತುಂಬಾ ಚನ್ನಾಗಿ ಬರೆಯುತ್ತಾರೆ. ಅವರ ಕೃತಿಗಳ ಕಥಾ ವಸ್ತು ವಿಶೇಷವಾಗಿದ್ದು ಅವರ ಬರವಣಿಗೆಯ ಶೈಲಿ ಕೂಡ ಓದುಗನಿಗೆ ಬೇಸರವಾಗದಂತಿರುತ್ತದೆ. ಅವರ ಈ ‘ಗುಜರಿ ತೋಡಿ’ ಕಾದಂಬರಿ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಬೇಕು ಬರಹಗಾರರನ್ನು ಪ್ರೋತ್ಸಾಹಿಸಬೇಕೆಂದರು.


ಅಭಿಯಂತರ ಅರುಣಕುಮಾರ ಪಾಟೀಲ ಅಧ್ಯಕ್ಕತೆ ವಹಿಸಿದ್ದರು ಡಾ ರಾಮಕೃಷ್ಣ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು ರಜಿಷ್ಟಾರ ಕೆ ನಾಗೇಂದ್ರ ಡಾ ಸರಜೂ ಕಾಟ್ಕರ ಪ್ರೊ ಡಿ ಎಸ್ ಚೌಗಲೆ ಶ್ರೀಧರ ಕುಲಕರ್ಣಿ ಯ ರು ಪಾಟೀಲ ರಂಗಕರ್ಮಿ ಝಕೀರ ನದಾಫ ಕೆ ಟಿ ಜೋಶಿ ರಮೇಶ ಜಂಗಲ್ ಮಂಜುಳಾ ಜೋಶಿ ಬಂಡು ಕುಲಕರ್ಣಿ ಡಾ ಅರವಿಂದ ಕುಲಕರ್ಣಿ ಅನಂತ ಪಪ್ಪು ಪ್ರಾ ಬಿ ಎಸ್ ಗವಿಮಠ ಮುಂತಾದವರು ಉಪಸ್ಥಿತರಿದ್ದರು.


ಲೇಖಕ ಶಿರೀಷ ಜೋಶಿ ತಮ್ಮ ಸಾಹಿತ್ಯ ರಂಗಭೂಮಿ ಮತ್ತು ಸೇವಾ ಅನುಭವಗಳನ್ನು ಹಂಚಿಕೊಂಡರು. ಬಸವರಾಜ ಗಾರ್ಗಿ ನಿರೂಪಿಸಿದರೆ ಶ್ರಧ್ದಾ ಪಾಟೀಲ ಸ್ವಾಗತಿಸಿದರು ಶ್ರೀನಾಥ ಜೋಶಿ ವಂದಿಸಿದರು ಪ್ರೊ ನೀರಜಾ ಗಣಾಚಾರಿ ಅತಿಥಿಗಳ ಪರಿಚಯ ಮಾಡಿಕೊಟ್ಟರು.

ಇದೆ ಸಂದರ್ಭದಲ್ಲಿ ಚಿತ್ರಕಲಾ ಬಾಳು ಸದಲಗೆ ದಂಪತಿಗಳನ್ನು ಸತ್ಕರಿಸಲಾಯಿತು.

Bottom Add3
Bottom Ad 2