Latest

ವಿಮಾನದಲ್ಲಿ ಯೆರ್ರಾಬಿರ್ರಿ ಬಡಿದಾಡಿದ ಮಹಿಳಾಮಣಿಗಳು

ಪ್ರಗತಿವಾಹಿನಿ ಸುದ್ದಿ, ಬ್ರಾಸಿಲ್ಲಾ: ಬಸ್, ಟೆಂಪೊಗಳಲ್ಲಿ ಕಿಟಕಿ ಬದಿ ಸೀಟ್ ಗಾಗಿ ಹಠ ಹಿಡಿದು ಮಕ್ಕಳು ಗುದ್ದಾಡುವುದನ್ನು ಸಾಮಾನ್ಯವಾಗಿ ಕಂಡಿರಬಹುದು. ಆದರೆ ಇಲ್ಲಿಬ್ಬರು ನಾರಿಮಣಿಗಳು ವಿಮಾನದಲ್ಲಿ ಕಿಟಕಿ ಬದಿ ಸೀಟ್ ಗಾಗಿ ಗುದ್ದಾಡಿ ಇಡೀ ಜಗತ್ತಿನ ಕಣ್ಣು ತೆರೆಸಿದ್ದಾರೆ.

ಇವರ ಗುದ್ದಾಟಕ್ಕೆ ವಿಮಾನ ಎರಡು ತಾಸು ತಡವಾಗಿ ಹಾರಿದೆ. ಈ ಘಟನೆ ನಡೆದಿರುವುದು ಸಾವೊ ಪಾಲೊದಲ್ಲಿ ಸಾಲ್ವಡಾರ್ (ಎಸ್‌ಎಸ್‌ಎ) ಮತ್ತು ಕಾಂಗೋನ್‌ಹಾಸ್ (ಸಿಜಿಎಚ್) ನಡುವೆ.

ವಿಮಾನ ಟೇಕ್ ಆಫ್ ಆಗುವ ಕೆಲವೇ ನಿಮಿಷಗಳ ಮೊದಲು ಎರಡು ಕುಟುಂಬಗಳ ನಡುವೆ ಜಗಳ ಪ್ರಾರಂಭವಾಯಿತು. ಮಹಿಳೆಯೊಬ್ಬರು ತಮ್ಮ ವಿಕಲಚೇತನ ಮಗುವಿನೊಂದಿಗೆ ಕಿಟಕಿ ಕಡೆ ಸೀಟ್ ನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಸಹಪ್ರಯಾಣಿಕನಿಗೆ ಕೋರಿದರು.  ಆದರೆ ಆ ಪ್ರಯಾಣಿಕ ಇದಕ್ಕೆ ನಿರಾಕರಿಸಿದರು. ಇದು ಇಬ್ಬರೂ ಪ್ರಯಾಣಿಕರ ಕುಟುಂಬದ ನಡುವೆ  ಮಾತಿನ ಚಕಮಕಿಗೆ ಕಾರಣವಾಯಿತು.

ಸಿಟ್ಟಿಗೆದ್ದ ವಿಕಲಚೇತನ ಮಗುವಿನೊಂದಿಗೆ ಬಂದಿದ್ದ ಮಹಿಳೆ ನಿರಾಕರಿಸಿದ ವ್ಯಕ್ತಿಯೊಂದಿಗಿದ್ದ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮುಗಿಬಿದ್ದು ನೇರವಾಗಿ ಬಡಿದಾಟಕ್ಕೇ ಇಳಿದರು. ತಮ್ಮ ಮೇಲಿನ ಆಕ್ರಮಣಕ್ಕೆ ಇನ್ನೊಬ್ಬ ಮಹಿಳೆ ಪ್ರತಿ ಆಕ್ರಮಣವೂ ನಡೆಯಿತು. ಇದರಿಂದ ವಿಮಾನದಲ್ಲಿದ್ದ ಉಳಿದ ಪ್ರಯಾಣಿಕರು ಹೌಹಾರಿದರು. ಆಗಷ್ಟೇ ವಿಮಾನ ಟೇಕಾಫ್ ಆಗಲಿದ್ದುದರಿಂದ ವಿಮಾನದ ಬಾಗಿಲು ಮುಚ್ಚಲಾಗಿತ್ತು.

Home add -Advt

ತೀವ್ರವಾದ ನಿಂದನೆಗಳು, ಕಪಾಳಮೋಕ್ಷ, ಗುದ್ದಾಟ, ಎಳೆದಾಟ ಕೆಲ ನಿಮಿಷ ಮುಂದುವರಿಯುತ್ತಲೇ ವಿಮಾನದ ಸಿಬ್ಬಂದಿ ಮಧ್ಯ ಪ್ರವೇಶಿಸಿ ಇಬ್ಬರನ್ನೂ ಬಿಡಿಸಿದರು. ಬಡಿದಾಡಿದ ಪ್ರಯಾಣಿಕರನ್ನು ವಿಮಾನದ ಸಿಬ್ಬಂದಿ ಕೆಳಗಿಳಿಸಿದರು.

ಸ್ಪಟಿಕ ಸ್ಪಷ್ಟ ನದಿಯಲ್ಲಿ ಮಹಿಳೆ ದೋಣಿಯಾನ: ಸಖತ್ ವೈರಲ್ ಆದ ಅಪರೂಪದ ವಿಡಿಯೊ

https://pragati.taskdun.com/woman-boating-in-crystal-clear-river-rare-video-goes-viral/

*ಅಂತರರಾಷ್ಟ್ರೀಯ ಕ್ಯಾನ್ಸರ್ ದಿನಾಚರಣೆ*

https://pragati.taskdun.com/international-cancer-daybelagavihnji-cancer-hospital/

*ಮಹಾಶಿವರಾತ್ರಿ ಮಹೋತ್ಸವ; ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*

https://pragati.taskdun.com/mahashivaratri-mahotsavanidasosiduradundishwara-sidda-samstana/

Related Articles

Back to top button