ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸ್ವರಸಾಧನಾ ಸಂಗೀತ ಮಹಾವಿದ್ಯಾಲಯದ ವತಿಯಿಂದ ಬೆಳಗಾವಿಯ ಸರಸ್ವತಿ ವಾಚನಾಲಯದಲ್ಲಿ ಭಾನುವಾರ ಪಂಡಿತ ಪಲುಸ್ಕರ್ ಅವರ ಪುಣ್ಯಸ್ಮರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಬೆಳಗಾವಿಯ ವಿವಿಧ ಕಲಾವಿದರಿಗೆ ಸನ್ಮಾನ ಮಾಡಲಾಯಿತು. ಅಲಂಕಾರ ಹಾಗೂ ವಿಷಾರದಾ ಪದವಿಯಲ್ಲಿ ಸಾಧನೆ ಮಾಡಿದ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಅಭಿನಂದಿಸಲಾಯಿತು. ಸ್ವರಸಾಧನಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಾಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರು.
ತಬಲಾ ಸಾಥೀದಾರರಾಗಿ ಜಿತೇಂದ್ರ ಸಾಬಣ್ಣವರ್, ನಿತಿನ್ ಸುತಾರ್ ಹಾಗೂ ಸಂಚಿತ ಪಾಟೀಲ ಮತ್ತು ಹಾರ್ಮೋನಿಯಂ ಸಾಥೀದಾರರಾಗಿ ಚೈತ್ರಾ ಅಧ್ಯಾಪಕ ಹಾಗೂ ಶೃತಿ ಪಾಟೀಲ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಸುಮನ ಪಾಟೀಲ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅತಿಥಿ ಕಲಾವಿದರಾಗಿ ಮಾಧುರಿ ಮುತಾಲಿಕ್ ದೇಸಾಯಿ ಆಗಮಿಸಿ ತಮ್ಮ ಸುಶ್ರಾವ್ಯ ಗಾಯನ ಮತ್ತು ಭಕ್ತಿಗೀತೆಗಳಿಂದ ರಂಜಿಸಿದರು.
ಸೀತಾ ಬೈಲಕೇರಿ ಸ್ವಾಗತ ಭಾಷಣ ಮಾಡಿ, ಸಂಗೀತ ವಿದ್ಯಾಲಯದ ಕಿರು ಪರಿಚಯ ನೀಡಿದರು. ರಾಜಶ್ರೀ ಖೋಪರ್ಡೇ ಪಂಡಿತ ಪಲುಸ್ಕರ್ ಅವರ ಜೀವನ ಸಾಧನೆಗಳನ್ನು ವಿವರಿಸಿದರು. ವಂದನಾ ಕುಲಕರ್ಣಿ ಅತಿಥಿ ಕಲಾವಿದರನ್ನು ಪರಿಚಯಿಸಿದರು. ಜಾನಕಿ ಘೋರ್ಪಡೆ ಬೆಳಗಾವಿಯ ಕಲಾವಿದರನ್ನು ಪರಿಚಯಿಸಿದರು. ಸವಿತಾ ಕಟ್ಟಿ ವಿದ್ಯಾಲಯದ ವಿಶಾರದ, ಅಲಂಕಾರ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಸೀಮಾ ಕುಲಕರ್ಣಿ ಗಾಯನ ಪ್ರಸ್ತುತಪಡಿಸಿ, ವಂದನಾರ್ಪಣೆ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ