
ಪ್ರಗತಿವಾಹಿನಿ ಸುದ್ದಿ; ವಾರಣಸಿ: ಕಾಶಿ ವಿಶ್ವನಾಥ ಮಂದಿರ ಬಳಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರ ವಿಗ್ರಹಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಸಿ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿಡಿಯೋ ಸರ್ವೆ ನಡೆಸುವಂತೆ ಆದೇಶ ನೀಡಿದೆ.
ಮೇ 17ರ ಒಳಗೆ ವಿಡಿಯೋ ಚಿತ್ರೀಕರಣ ಸಮೇತ ಸರ್ವೆ ಕಾರ್ಯ ಮುಗಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಮಸೀದಿ ನೆಲಮಾಳಿಗೆಯನ್ನೂ ತೆರೆದು ಸರ್ವೆ ಮಾಡುವಂತೆ ತಿಳಿಸಿದೆ. ಅಲ್ಲದೇ ಪೊಲಿಸ್ ಆಯುಕ್ತ ಅಜಯ್ ಮಿಶ್ರಾ ಅವರನ್ನು ಬದಲಿಸುವಂತಿಲ್ಲ ಎಂದು ಹೇಳಿರುವ ಕೋರ್ಟ್ ಮಿಶ್ರಾ ಜತೆಗೆ ಇನ್ನಿಬ್ಬರು ಸಹಾಯಕ ಆಯುಕ್ತರ ನೇಮಕ ಮಾಡುವಂತೆ ಆದೇಶ ನೀಡಿದೆ.
ಆಯುಕ್ತ ಅಜಯ್ ಮಿಶ್ರಾ ಜತೆ ವಿಶಾಲ್ ಸಿಂಗ್ ಹಾಗೂ ಅಜಯ್ ಸಿಂಗ್ ಅವರನ್ನು ಸರ್ವೆಗೆ ಕಮಿಷನರ್ ಗಳಾಗಿ ನೇಮಕ ಮಾಡಿದೆ.
ಜ್ಞಾನವಾಪಿ ಮಸೀದಿಯ ಹೊರ ಗೋಡೆಗೆ ತಾಗಿಕೊಂಡು ಶೃಂಗಾರ ಗೌರಿ, ಗಣೇಶ, ಹನುಮಾನ್ ಹಾಗೂ ನಂದಿ ವಿಗ್ರಹಗಳಿವೆ. ಅವುಗಳಿಗೆ ಪೂಜೆ ನೆರವೇರಿಸಲು ಅವಕಾಶ ನೀಡಬೇಕು ಎಂದು ಐವರು ಮಹಿಳೆಯರು ವಾರಣಸಿ ಕೋರ್ಟ್ ಮೊರೆ ಹೋಗಿದ್ದರು. ಈ ಹಿಂದೆಯೂ ಕೋರ್ಟ್ ಸರ್ವೆ ನಡೆಸುವಂತೆ ಆದೇಶ ನೀಡಿತ್ತು. ಆದರೆ ಸ್ಥಳೀಯ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.
ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ಸಂಪುಟ ಸಭೆ ಅನುಮೋದನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ