Latest

*ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಬಹಿರಂಗ ಪತ್ರ ಬರೆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದ ತೀವ್ರಗೊಂಡಿದ್ದು, ಆಡಳಿತ ಸರ್ಕಾರವು ರಣಹೇಡಿಯಂತೆ ಬಾಲ ಮುದುರಿಕೊಂಡಿರುವುದು, ವಿರೋಧ ಪಕ್ಷವು ಈ ವಿಷಯಕ್ಕೂ ತಮಗೂ ಸಂಬಂಧವೇ ಇಲ್ಲದಿರುವಂತೆ ಇರುವುದು, ಕರ್ನಾಟಕಕ್ಕೆ ಕನ್ನಡ-ಕೇಂದ್ರಿತ ಸರ್ಕಾರದ ಅನಿವಾರ್ಯತೆ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಗಡಿ ವಿವಾದದ ಕುರುತು ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡರು, ಇದು ಕನ್ನಡಿಗರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕರ್ನಾಟಕದ ಜನತೆಯ ಹಿತಾಸಕ್ತಿಯ ವಿರುದ್ಧ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ದಾಳಿಯ ಭಾಗ ಎಂದು ಬಹಿರಂಗ ಪತ್ರದ ಮೂಲಕ ತಿಳಿಸಿದ್ದಾರೆ. ನಮ್ಮ ತೆರಿಯ ಸರಿಯಾದ ಪಾಲು ನಮಗೆ ಸಿಗಬೇಕಾದರೆ, ನಮ್ಮ ಮಕ್ಕಳಿಗೆ ಉದ್ಯೋಗ ಸಿಗಬೇಕಾದರೆ, ನಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಹೊರಗಿನವರಿಂದ ರಕ್ಷಿಸಬೇಕಾದರೆ, ನಮ್ಮ ಅಸ್ಮಿತತೆಯೊಂದಿಗೆ ರಾಜೀ ಮಾಡಿಕೊಳ್ಳದೇ ನಮ್ಮ ನೋವನ್ನು ಅರ್ಥಮಾಡಿಕೊಳ್ಳಬಲ್ಲರು ಎಂಬ ಸತ್ಯವನ್ನು ಅರಿತು ಕನ್ನಡ ಪ್ರಾದೇಶಿಕ ಪಕ್ಷವನ್ನು ಬಲಪಡಿಸಬೇಕು ಎಂದು ತಿಳಿಸಿದ್ದಾರೆ

ʼಕರ್ಣಾಟ ಬಲಂ ಅಜೇಯಂʼ ಎಂದು ಕೊಂಡಾಡುವಷ್ಟು ಬಲಿಷ್ಠವಾಗಿದ್ದ ನಮ್ಮ ರಾಜ್ಯವು ಇಂದು ಛಿದ್ರ ಛಿದ್ರವಾಗುವ ಭಯದ ವಾತವರಣ ನಿರ್ಮಾಣವಾಗಿರುವುದಕ್ಕೆ ರಾಷ್ಟ್ರೀಯ ಪಕ್ಷಗಳ ನಿರ್ಲಕ್ಷ್ಯಕರ ಆಡಳಿತ ಕಾರಣವೇ ಹೊರತು ಮತ್ತೀನೇನು ಅಲ್ಲ. ಕರ್ನಾಟಕದ ಗತವೈಭವ ಮರುಕಳಿಸಬೇಕಿದ್ದರೇ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕಿದೆ. ಇದು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದರಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

 

*ಗೋವಾ ಸಿಎಂ ಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ*

https://pragati.taskdun.com/kalasa-bandurigoa-cm-savanthcm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button