Latest

*ಹಾಲಿ JDS ಶಾಸಕನಿಗೆ ಸೆಡ್ಡು ಹೊಡೆದು ಹೊಸ ಅಭ್ಯರ್ಥಿಗೆ ಅರಸಿಕೆರೆ ಟಿಕೆಟ್ ಘೋಷಿಸಿದ HDK*

ಪ್ರಗತಿವಾಹಿನಿ ಸುದ್ದಿ; ಹಾಸನ: ಹಾಸನ ಜಿಲ್ಲೆಯ ಅರಸಿಕೆರೆ ಕ್ಷೇತ್ರದ ಜೆಡಿಎಸ್ ಹಾಲಿ ಶಾಸಕ ಶಿವಲಿಂಗೆಗೌಡರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಚುನಾವಣೆ ಗೆಲ್ಲಲು ಯಾರ ಕಾಲು ಬೇಕಾದ್ರೂ ಹಿಡಿಯುತ್ತಾರೆ. ಪಕ್ಷವನ್ನು ಹಂತ ಹಂತವಾಗಿ ಮುಗಿಸಲು ಯತ್ನಿಸಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಅರಸಿಕೆರೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಿನ್ನೆಯೂ ಶಿವಲಿಂಗೇಗೌಡರಿಗೆ ದುಡುಕದಂತೆ ರೇವಣ್ಣ ಹೇಳಿದ್ದರು. ಇಂದು ಸಮಾವೇಶಕ್ಕೆ ಹೋಗದಂತೆ ಶಿವಲಿಂಗೇಗೌಡರು ಜನರಿಗೆ ಹಣ ಹಂಚಿದ್ದಾರೆ. ಆದಾಗ್ಯೂ ಹಣದ ಆಮಿಷಕ್ಕೆ ಒಳಗಾಗದೇ ಜನಸಾಗರವೇ ಸಮಾವೇಶಕ್ಕೆ ಬಂದಿದೆ. ಅರಸಿಕೆರೆ ಕ್ಷೇತ್ರದ ಜನರು ಹಣದ ಆಸೆಗೆ ಒಳಗಾಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಅರಸಿಕೆರೆ ಕ್ಷೇರದ ಅಭ್ಯರ್ಥಿಯ ಹೆಸರು ಘೋಷಿಸಿದ ಕುಮಾರಸ್ವಾಮಿ, ಈಬಾರಿ ಬಾಣಾವರ ಅಶೋಕ್ ಗೆ ಅರಸಿಕೆರೆ ಜೆಡಿಎಸ್ ಟಿಕೆಟ್ ನೀಡುವುದಾಗಿ ತಿಳಿಸಿದರು. ಈ ಮೂಲಕ ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಟಿಕೆಟ್ ಕೈತಪ್ಪಿದೆ. ಶಿವಲಿಂಗೇಗೌಡರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

*ಚಿನ್ನ ಗಿರವಿ ಇಡಲು ಬಂದು ಅಂಗಡಿಗೆ ಬೆಂಕಿಯಿಟ್ಟ ಗ್ರಾಹಕ*

Home add -Advt

https://pragati.taskdun.com/gold-shopfire-accidentbangalore/

Related Articles

Back to top button