ಪ್ರಗತಿವಾಹಿನಿ ಸುದ್ದಿ; ವಿಜಯಪುರ: ತಮ್ಮ ಬಗ್ಗೆ ಬಿಜೆಪಿಯಿಂದ ‘ಬೈಗಮಿ’ ಪದ ಬಳಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ‘ಆ ಪದ ಬಿಜೆಪಿಯವರಿಗೂ ಅನ್ವಯವಾಗುತ್ತೆ’ ಪ್ರತಿನಿತ್ಯ ಅದರ ಆಧಾರದ ಮೇಲೆ ಅವರು ನಡೆಯೋದು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದ ರಾಂಪುರದಲ್ಲಿ ಮಾತನಾಡಿದ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು. ನಾನು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇನೆ. ನಮ್ಮ ಪಕ್ಷದ ಬೆಳವಣಿಗೆ ಸಹಿಸಲು ಎರಡೂ ಪಕ್ಷಗಳಿಗೂ ಆಗುತ್ತಿಲ್ಲ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿಜೆಪಿಗರ ಮನೆಯಲ್ಲಿ ಹೆಗ್ಗಣವೇ ಸತ್ತುಬಿದ್ದಿದೆ. ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ಹತ್ತರಷ್ಟು ಕೆಸರನ್ನು ನಾನು ಎರಚಬಲ್ಲೆ ಎಂದು ಎಚ್ಚರಿಸಿದ್ದಾರೆ.
ನಾನು ಇನ್ನೊಬ್ಬರ ರೀತಿ ಯಾವುದನ್ನೂ ಕದ್ದು ಮಾಡಿಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿಯೇ ಮಾತನಾಡಿದ್ದೆ, ಸ್ಪಷ್ಟನೆಯನ್ನೂ ಕೊಟ್ಟಿದ್ದೆ. ಜೀವನದಲ್ಲಿ ಕೆಲ ಕೆಟ್ಟ ಘಟನೆಗಳು ನಡೆದಿವೆ. ದಾರಿ ತಪ್ಪಿದ್ದೆ ಅದನ್ನು ಸರಿ ಮಾಡಿಕೊಂಡಿದ್ದೇನೆ. ಬಿಜೆಪಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಇತಿಹಾಸವಿದೆ. ನನ್ನ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡಿದರೆ ನಾನು ಹೆದರುವುದಿಲ್ಲ. ನನ್ನದು ಜೀವನ ತೆರೆದ ಪುಸ್ತಕವಿದ್ದಂತೆ ಯಾವುದನ್ನೂ ಕದ್ದೂ ಮುಚ್ಚಿ ಮಾಡಿಲ್ಲ. ವೈಯಕ್ತಿಕ ವಿಚಾರ ಮುಂದಿಟ್ಟು ಟೀಕಿಸಿದರೆ ನಾನೂ ಬಿಜೆಪಿಯವರ ಹಲವು ವಿಚಾರ ಹೊರತೆಗೆಯಬೇಕಾಗುತ್ತೆ. ಬಿಜೆಪಿ ನಾಯಕರು ಜವಾಬ್ದಾರಿ ಅರಿತು ಮಾತನಾಡಲಿ ಎಂದು ಗುಡುಗಿದರು.
ಹೆಚ್.ಡಿ.ಕೆಗೆ ‘ಬೈಗಮಿ’ ಪದ ಬಳಸಿ ಟೀಕಿಸಿದ ಬಿಜೆಪಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ