Latest

RSS ನ 4 ಸಾವಿರ IAS, IPSಗಳು; ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್.ಎಸ್.ಎಸ್ ಆರ್ಭಟ; ಹೆಚ್ ಡಿಕೆ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿ; ರಾಮನಗರ; ಆರ್  ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೇಶದಲ್ಲಿನ 4 ಸಾವಿರ ಸಿವಿಲ್ ಸರ್ವೆಂಟ್ ಗಳು ಆರ್ ಎಸ್ ಎಸ್ ಕಾರ್ಯಕರ್ತರು. ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್ ಎಸ್ ಎಸ್ ಆರ್ಭಟ ಹೆಚ್ಚುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರಾಮನಗರದ ಕೇತಗಾನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಾಗಾರದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ದೇಶದಲ್ಲಿರುವ 4000 ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಆರ್.ಎಸ್.ಎಸ್ ಕಾರ್ಯಕರ್ತರಾಗಿದ್ದಾರೆ ಬೇರೆ ಬೇರೆ ಇನ್ಸ್ಟಿಟ್ಯೂಟ್ ಗಳಲ್ಲಿ ತಮ್ಮ ಟೀಂ ಇಟ್ಟುಕೊಂಡು ಬಿಜೆಪಿ ಅಥವಾ ಆರ್ ಎಸ್ ಎಸ್ ಕಾರ್ಯಕರ್ತರಿಗೆ ಟ್ರೇನಿಂಗ್ ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದು, ಅಂತಹ ಇನ್ಸ್ಟಿ ಟ್ಯೂಷನ್ ಗಳಿಂದ ಬಂದ ಅಭ್ಯರ್ಥಿಗಳನ್ನು ಮಾತ್ರ ಐಎಎಸ್, ಐಪಿಎಸ್ ಹುದ್ದೆಗೆ ಆಯ್ಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

2016ರ ಒಂದೇ ವರ್ಷದಲ್ಲಿ ಪಾಸ್ ಆಗಿರುವ ಬರೋಬ್ಬರಿ 676 ಅಭ್ಯರ್ಥಿಗಳು ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದಾರೆ. ಇನ್ ಸ್ಟಿಟ್ಯೂಟ್ ಗಳಲ್ಲಿ ತಮ್ಮದೇ ಟೀಂ ಇಟ್ಟುಕೊಂಡು ಅವರಿಗೆ ತರಬೇತಿ ನೀಡಿ ಅಂತವರನ್ನು ಆಯ್ಕೆ ಮಾಡುವ ಮೂಲಕ ಇಡೀ ದೇಶದ ಆಡಲಿತ ವ್ಯಸ್ಥೆಯಲ್ಲಿ ತಮ್ಮ ಹಿಡಿತ ಸಾಧಿಸಲು ಹಿಡನ್ ಅಜೆಮ್ಡಾ ಮೂಲಕ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ದೇಶದಲ್ಲಿರುವುದಾಗಲಿ, ರಾಜ್ಯದಲ್ಲಿರುವುದಾಗಲಿ ಬಿಜೆಪಿ ಸರ್ಕಾರವಲ್ಲ, ಆರ್ ಎಸ್ ಎಸ್ ನ ಸಂಘಟನೆಗಳಿಂದಾಗಿ ಬಿಜೆಪಿ ಎಂಬ ಹೆಸರಿನ ಸರ್ಕಾರ ರಚನೆ ಮಾಡಿಕೊಂಡಿದ್ದಾರಷ್ಟೇ. ರಾಜ್ಯದ ಸಿಎಂ ಬೊಮ್ಮಾಯಿ ಸರ್ಕಾರವಾಗಲಿ, ಕೇಂದ್ರದಲ್ಲಿರುವ ಪ್ರಧಾನಿ ಮೋದಿ ಸರ್ಕಾರವಾಗಲಿ ಬಿಜೆಪಿ ಸರ್ಕಾರವಲ್ಲ, ಆರ್ ಎಸ್ ಎಸ್ ಸರ್ಕಾರ. ಆರ್.ಎಸ್ ಎಸ್ ಮುಖಂಡರು ಹೇಳಿದಂತೆ ಸರ್ಕಾರ ನಡೆಸುತ್ತಿದ್ದಾರೆ. ದೇಶದ, ರಾಜ್ಯದ ಯುವ ಜನರ ದಾರಿ ತಪ್ಪಿಸಿ, ದುರುಪಯೋಗ ಪಡಿಸಿಕೊಂಡು ಅಶಾಂತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Home add -Advt

ಬಿಜೆಪಿ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ಶಂಕರಗೌಡ ಪಾಟೀಲ ವ್ಯಂಗ್ಯ

Related Articles

Back to top button