LatestUncategorized

*ನಾನು ಕೈ ಜೋಡಿಸದಿದ್ದರೆ BSY ರಾಜಕೀಯವೇ ಅಂತ್ಯವಾಗ್ತಿತ್ತು; ವಿಜಯೇಂದ್ರಗೆ ತಿರುಗೇಟು ನೀಡಿದ ಹೆಚ್.ಡಿಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ; ಕಾರವಾರ; ಅಂದು ನಾನು ಯಡಿಯೂರಪ್ಪನವರ ಜೊತೆ ಕೈ ಜೋಡಿಸದಿದ್ದರೆ ಅವರು ರಾಜಕೀಯವಾಗಿ ನಿರ್ನಾಮವಾಗುತ್ತಿದ್ದರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಲಿಂಗಾಯತ ಸಮಾಜಕ್ಕೆ ಜೆಡಿಎಸ್ ಏನು ಮಾಡಿದೆ ಎಂಬ ಬಿ.ವೈ.ವಿಜಯೇಂದ್ರ ಪ್ರಶ್ನೆಗೆ ಉತ್ತರಿಸುತ್ತಾ, ವೀರಶೈವ-ಲಿಂಗಾಯಿತ ಸಮಾಜದೊಂದಿಗಿನ ಒಡನಾಟದ ಬಗ್ಗೆ, ಯಡಿಯೂರಪ್ಪನವರ ಜೊತೆಗಿನ ರಾಜಕೀಯ ಒಡನಾಟದ ಬಗ್ಗೆ ವಿವರಿಸಿದರು.

ಅಂದು ಯಡಿಯೂರಪ್ಪನವರ ಜೊತೆ ನಾನು ಕೈ ಜೋಡಿಸದಿದ್ದರೆ ಅವರ ರಾಜಕೀಯ ಅಂತ್ಯವಾಗುತ್ತಿತ್ತು. ಯಡಿಯೂರಪ್ಪ ಸಿದ್ದಲಿಂಗಯ್ಯ ಎಂಬುವವರ ಬಳಿ ಒಂದು ಚೀಟಿ ಕಳುಹಿಸಿದ್ದರು. ಯಡಿಯೂರಪ್ಪ ಅವರನ್ನು ಮಂತ್ರಿ ಮಾಡುವಂತೆ ಸಿದ್ದಲಿಂಗಯ್ಯ ಅವರು ಕೂಡ ಮನವಿ ಮಾಡಿದ್ದರು. ಆಗ ನಾನು ನಿಮ್ಮ ನಾಯಕತ್ವ ಇರಲಿ ಎಂದು ಸಮ್ಮಿಶ್ರ ಸರ್ಕಾರ ಮಾಡಿದ್ದೆ. ಪಾಪ ವಿಜಯೇಂದ್ರಗೆ ಏನು ಗೊತ್ತು? ಎಂದರು.

ವಿಜಯೇಂದ್ರಗೆ ಏನೂ ಗೊತ್ತಿಲ್ಲ, ನಿನ್ನೆ ಮೊನ್ನೆ ಬಂದವರು ಇವರೆಲ್ಲ ಏನೋ ಹೇಳಿಕೆ ಕೊಡುತ್ತಿದ್ದಾರೆ. ನಮ್ಮ ತಂದೆ ಅಂದು ವಿಧಾನಸಭೆ ವಿಸರ್ಜನೆ ಮಾಡಲು ಹೊರಟಿದ್ದರು. ಆಗ ನಾನು ತಡೆದು ಯಡಿಯೂರಪ್ಪ ಜತೆ ಸೇರಿ ಸರ್ಕಾರ ರಚನೆ ಮಾಡಿದೆ. ಇಲ್ಲವಾದಲ್ಲಿ ಯಡಿಯೂರಪ್ಪನವರ ರಾಜಕೀಯ ಜೀವನ ಅಂದೇ ಅಂತ್ಯವಾಗುತ್ತಿತ್ತು. ಅಧಿಕಾರ ಇದ್ದ ವೇಳೆ ಬಿಜೆಪಿಗರನ್ನು ಗೌರವದಿಂದ ಕಂಡಿದ್ದೇನೆ. ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರಿಯಾಗಿತ್ತು ಎಂದು ಹೇಳಿದ್ದಾರೆ.

Home add -Advt

*BJPಯಲ್ಲಿ ಯಡಿಯೂರಪ್ಪ ಕಡೆಗಣನೆ; ಸ್ಪಷ್ಟನೆ ನೀಡಿದ ಬಿಎಸ್ ವೈ*

https://pragati.taskdun.com/b-s-yedyurappareactionbjpsideline/

Related Articles

Back to top button